ಜೈಪುರ: ರಾಜಸ್ಥಾನದ ಅಬು ರಸ್ತೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ತಡವಾಗಿ ಸ್ಥಳಕ್ಕೆ ಬಂದಿದ್ದರು. ಈ ವೇಳೆ ಅವರು ತೆಗೆದುಕೊಂಡ ನಿರ್ಧಾರ ಎಲ್ಲರ ಗಮನ ಸೆಳೆದಿದೆ.
ಹೌದು, ಮೋದಿ ಅವರು ರ್ಯಾಲಿಗೆ ತಡವಾಗಿ ಬಂದಿದ್ದಾರೆ. ಅವರು ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕವನ್ನು ಬಳಸುವ ಯಾವುದೇ ನಿಯಮವನ್ನು ಉಲ್ಲಂಘಿಸಲು ಬಯಸದ ಕಾರಣ, ಮೈಕ್ ಬಳಸದೇ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.
#WATCH | At Abu Road in Rajasthan, PM Narendra Modi didn’t use a mic to address the huge gathering as he didn’t want to violate any rule of using loudspeaker post 10pm pic.twitter.com/8Q0SyKFkdI
— ANI (@ANI) September 30, 2022
“ನಾನು ಇಲ್ಲಿಗೆ ತಲುಪಲು ತಡವಾಯಿತು. ಈಗಾಗಲೇ ರಾತ್ರಿ 10 ಗಂಟೆಯಾಗಿದೆ. ನಾನು ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು ಎಂದು ನನ್ನ ಆತ್ಮಸಾಕ್ಷಿಯು ಹೇಳುತ್ತದೆ. ಹಾಗಾಗಿ ನಿಮ್ಮ ಮುಂದೆ ನಾನು ಕ್ಷಮೆಯಾಚಿಸುತ್ತೇನೆ” ಎಂದು ಮೋದಿ ಮೈಕ್ ಮತ್ತು ಧ್ವನಿವರ್ಧಕವಿಲ್ಲದೆ ಸಭೆಯನ್ನುದ್ದೇಶಿಸಿ ಮಾತನಾಡಿದರು.
BREAKING NEWS : ಉಕ್ರೇನ್ನಲ್ಲಿ ನಾಗರಿಕ ಬೆಂಗಾವಲು ವಾಹನದ ಮೇಲೆ ರಷ್ಯಾ ಕ್ಷಿಪಣಿ ದಾಳಿ: 30 ಸಾವು, 88 ಮಂದಿಗೆ ಗಾಯ
Viral Video: ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ʻಗಾರ್ಬಾʼ ಡ್ಯಾನ್ಸ್ ಮಾಡಿದ ಪ್ರಯಾಣಿಕರು!