ಮೈಸೂರು : ಬಾಬ್ರಿ ಮಸೀದಿ ಕೆಡವಿದಾಗ ನಾನು ಅಯೋಧ್ಯೆಯಲ್ಲಿ ಟೆಂಟ್ ನಲ್ಲಿ ಎರಡು ಬೊಂಬೆಗಳನ್ನ ಇಟ್ಟಿದ್ದು ನೋಡ್ದಿದೆ ಜನರೆಲ್ಲಾmರೂ ಇವನೇ ಶ್ರೀ ರಾಮ ಶ್ರೀ ರಾಮ ಎಂದು ಹೇಳುತ್ತಿದ್ದರು ಎಂಬ ಸಚಿವ ಕೆ ಏನ್ ರಾಜಣ್ಣ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ಕಿಡಿ ಕಾರಿದ್ದು ಡಿಸಿಎಂ ಸ್ಥಾನದ ಆಸೆಗಾಗಿ ಸಚಿವ ರಾಜಣ್ಣ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಮಂದಿರದ ಕುರಿತು ಸಚಿವ ಕೆ ಎನ್ ರಾಜಣ್ಣ ಹೇಳಿಕೆಯ ವಿಚಾರವಾಗಿ ಡಿಸಿಎಂ ಸ್ಥಾನದ ಆಸೆಗಾಗಿ ರಾಜಣ್ಣ ಆ ರೀತಿ ಮಾತು ಆಡುತ್ತಿದ್ದಾರೆ ಎಂದು ಮೈಸೂರಿನಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ರಾಜಣ್ಣ ವಿರುದ್ಧ ವಾಗ್ದಾಳಿ ನಡೆಸಿದರು.
ಎಸ್ ಟಿ ಸಮುದಾಯ ರಾಮನನ್ನು ಎದೆಯಗೂಡಲಿ ಇಟ್ಟುಕೊಂಡಿದ್ದಾರೆ.ಕೆ ಎನ್ ರಾಜಣ್ಣ ಅದೇ ಸಮುದಾಯಕ್ಕೆ ಸೇರಿದವರು. ಸಿಎಂ ಸಿದ್ದರಾಮಯ್ಯ ಓಲೈಸಲು ಇಲ್ಲಸಲ್ಲದ ಮಾತು ಆಡುತ್ತಿದ್ದಾರೆ. ಇಂಥವರಿಗೆಲ್ಲ ಜನರೇ ಉತ್ತರ ಕೊಡುತ್ತಾರೆ ಎಂದು ಮೈಸೂರಿನಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಸಂಸದ ಪ್ರತಾಪ್ ಸಿಂಹ ಕಿಡಿ ಕಾರಿದರು.