ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್ ಗೆ ರಾಜಯೋಗವಿದ್ದು, ಮುಂದೊಂದು ದಿನ ಅವರು ಶಾಸಕ, ಸಚಿವನಾದ್ರೂ ಆಗಬಹುದು ಎಂದು ಖ್ಯಾತ ಜ್ಯೋತಿಷಿ ಆರ್ಯವರ್ಧನ್ ಗುರೂಜಿ ಭವಿಷ್ಯ ನುಡಿದಿದ್ದಾರೆ.
ನಟ ದರ್ಶನ್ ಅವರ ಹೆಸರು ಮತ್ತು ಜನ್ಮ ದಿನಾಂಕವನ್ನು ಗಣನೆಗೆ ತೆಗೆದುಕೊಂಡ ಗುರೂಜಿ ಸಂಖ್ಯಾಶಾಸ್ತ್ರದ ಪ್ರಕಾರ ಅವರ ಜನ್ಮ ದಿನಾಂಕವನ್ನು ವಿರೋಧಿಸುವ ಸಂಖ್ಯೆ 21ರೊಂದಿಗೆ ಹೋಲಿಕೆ ಮಾಡಿದರೆ ಅವರಿಗೆ ದರ್ಶನ್ ಹೆಸರು ಮಂಗಳಕರವಲ್ಲ. ಇದರಿಂದ ಅವರು ಜೀವನದಲ್ಲಿ ಅನೇಕ ಸವಾಲುಗಳನ್ನು ಮತ್ತು ಅಶಾಂತಿಯನ್ನು ಎದುರಿಸುತ್ತಾರೆ ಎಂದು ತಿಳಿಸಿದ್ದಾರೆ.
ನಟ ದರ್ಶನ್ ಅವರು ಹುಟ್ಟಿರೋದು 16ನೇ ತಾರೀಖು. ಡೇಟ್ ಆಫ್ ಬರ್ತ್ ಟೋಟಲ್ ಮಾಡಿದರೆ 33 ಬರುತ್ತೆ. ಅಸಲಿಗೆ, ದರ್ಶನ್ ಬಂಧನವಾಗಿರುವುದು ಈ ವರ್ಷದ ಆರನೇ ತಿಂಗಳಿನಲ್ಲಿ 7 ಮತ್ತು 6 ಒಳ್ಳೆಯ ಕಾಂಬಿನೇಶನ್. ಆದರೆ ಈ ವರ್ಷ 16, 6, 8 ನಂಬರ್ಗಳು ಸರಿ ಇಲ್ಲ. ಈ ವರ್ಷದ 6ನೇ ತಿಂಗಳು ಡೇಂಜರ್ ಆಗಿದೆ. ಹೀಗಾಗಿ ದರ್ಶನ್ಗೆ ಹೆಣ್ಣಿನಿಂದ ಸಮಸ್ಯೆ ಇದೆ. 2027ರವರೆಗೂ ತೊಂದರೆ ಇದ್ದದ್ದೇ. ಅದಾದ್ಮೇಲೆ ಶನಿದೆಸೆ ಆರಂಭ. ದರ್ಶನ್ ಶಾಸಕ, ಸಚಿವನಾಗುವ ಸಾಧ್ಯತೆ ಇದೆ ಎಂದು ಆರ್ಯವರ್ಧನ್ ಗುರೂಜಿ ಹೇಳಿದ್ದಾರೆ.