ತೆಲಂಗಾಣ : ಜುಲೈ 8 ರ ಶುಕ್ರವಾರದ ಮುಂಜಾನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ತಾಯಿ ಮತ್ತು ಅವರ ಮಗಳು ಸಾವನ್ನಪ್ಪಿದ್ದಾರೆ. ನಿರಂತರ ಮಳೆಯಿಂದಾಗಿ ಅವರ ಮನೆಯ ಗೋಡೆ ಕುಸಿದು ಇಬ್ಬರೂ ಸಾವನ್ನಪ್ಪಿದ್ದಾರೆ.
ಪದ್ಮನಗರದ ತಾಯಿ ನಡಿಕುಡಿ ಲಕ್ಷ್ಮಿ ಮತ್ತು ಅವರ ಮಗಳು ಕಲ್ಯಾಣಿ ತಮ್ಮ ಮನೆಯಲ್ಲಿ ಮಲಗಿದ್ದಾಗ ಈ ಘಟನೆ ಸಂಭವಿಸಿದೆ. ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ಎಡೆಬಿಡದೆ ಸುರಿದ ಮಳೆಗೆ ಮನೆ ಗೋಡೆ ಕುಸಿದಿದೆ.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳೀಯರ ಪ್ರಕಾರ, ಕಲ್ಯಾಣಿ ಇತ್ತೀಚೆಗೆ ಮದುವೆಯಾಗಿದ್ದು, ಕುಟುಂಬವು ಕೆಲವು ವರ್ಷಗಳ ಹಿಂದೆ ನಲ್ಗೊಂಡದಿಂದ ಶ್ರೀಕಾಕುಳಂಗೆ ವಲಸೆ ಬಂದಿತ್ತು. ರೈಲ್ವೆ ಕಾರ್ಮಿಕರಿಗೆ ಅಡುಗೆ ಮಾಡಿ ಜೀವನ ಸಾಗಿಸುತ್ತಿದ್ದರು