ಬೆಂಗಳೂರು: ಗೌರಿ-ಗಣೇಶ ಹಬ್ಬದ ಸಂಭ್ರಮದಲ್ಲಿರುವ ಜನತೆಗೆ ವರುಣಾ ದೊಡ್ಡ ಪ್ರಮಾಣದಲ್ಲಿ ಶಾಕ್ ನಿಡಿದ್ದು, ಹಬ್ಬದತ್ತ ಊರಿಗೆ ತೆರಳದೇ ಮನೆಲ್ಲೇ ಉಳಿಯುವ ಸನ್ನಿವೇಶ ನಿರ್ಮಾಣವಾಗಿದೆ. ಈ ನಡುವೆ ಆ.29, 30ರಂದು ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ; ದಕ್ಷಿಣ ಒಳನಾಡು ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ ಮತ್ತು ತುಮಕೂರು; ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ನೀಡಲಾಗಿದ್ದು, ಇದೇ ವೇಳೇ ನಾಳೆ ಕೂಡ ವರುಣ ಅಬ್ಬರಿಸಿದ್ದು, ನಾಳೆಯ ಹಬ್ಬದ ಸಂಭ್ರಮವನ್ನು ವರುಣ ಕಸಿದುಕೊಳ್ಳುವುದರಲ್ಲಿ ಅನುಮಾನವಿಲ್ಲ.
ಇಂದು ಬೆಂಗಳೂರಿನ ಶಾಲಾ-ಕಾಲೇಜುಗಳಿಗೆ ಡಿಸಿ ಕೆ.ಶ್ರೀನಿವಾಸ್ ರಜೆ ಘೋಷಣೆ
ನಗರದಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ಡಿಸಿ ಕೆ.ಶ್ರೀನಿವಾಸ್ ಅವರು ರಜೆಯನ್ನು ಇಂದು ಘೋಷಣೆ ಮಾಡಿದ್ದಾರೆ. ಅಂದ ಹಾಗೇ ಮಳೆಯಿಂದ ರಜೆ ಘೋಷಣೆ ಮಾಡಿದ ದಿನಗಳ ಶೈಕ್ಷಣಿಕ ಚಟುವಟಿಕೆಗಳನ್ನು ಮುಂದಿನ ದಿನಗಳಲ್ಲಿ ಸರಿದೂಗಿಸುವ ಷರತ್ತಿಗೊಳಪಟ್ಟು ರಜೆ ಘೋಷಣೆ ಮಾಡಲಾಗಿದೆ ಅಂತ ತಿಳಿದು ಬಂದಿದೆ.
Rainfall Forecast: Widespread light to moderate rains with isolated to scattered heavy rains likely over Coastal Karnataka, Malnad, NIK & SIK districts. pic.twitter.com/Dn1c4REFYX
— KSNDMC (@KarnatakaSNDMC) August 29, 2022