ಬೆಂಗಳೂರು : ನೈಋುತ್ಯ ಮುಂಗಾರು ಶನಿವಾರ ಕೇರಳ ಮತ್ತು ಕರ್ನಾಟಕ ಕರಾವಳಿಗೆ ಪ್ರವೇಶಿಸುವುದರೊಂದಿಗೆ, ಈ ಬಾರಿ ವಾಡಿಕೆಗಿಂತ ಒಂದು ವಾರ ಮುಂಚಿತವಾಗಿ ಮಳೆಗಾಲ ಆರಂಭವಾಗಿದೆ. 16 ವರ್ಷಗಳ ನಂತರ ಇಂತಹದ್ದೊಂದು ವಿಶೇಷ ದಾಖಲೆ ನಿರ್ಮಾಣವಾಗಿದೆ. ರಾಜ್ಯದಲ್ಲಿ ಒಂದು ವಾರಗಳ ಕಾಲ ವ್ಯಾಪಕ ಮಳೆಯಾಗುವ ಸಾಧ್ಯತೆಯಿದ್ದು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುಂಗಾರು ಅವಧಿಗೂ ಮುನ್ನವೇ ಆಗಮಿಸಿ ಬೇಸಿಗೆಯ ಬೇಗೆಗೆ ತೆರೆ ಎಳೆದಿದೆ.
ಹೌದು ನೈಋುತ್ಯ ಮುಂಗಾರು ಶನಿವಾರ ಕೇರಳ ಮತ್ತು ಕರ್ನಾಟಕ ಕರಾವಳಿಗೆ ಪ್ರವೇಶಿಸುವುದರೊಂದಿಗೆ, ಈ ಬಾರಿ ವಾಡಿಕೆಗಿಂತ ಒಂದು ವಾರ ಮುಂಚಿತವಾಗಿ ಮಳೆಗಾಲ ಆರಂಭವಾಗಿದೆ. ಕೇರಳದಲ್ಲಿ ಒಂದು ವಾರ ಮುಂಚೆಯೇ ಮುಂಗಾರು ಮಳೆ ಆರಂಭವಾಗಲಿದೆ. ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ಆರಂಭವಾಗುತ್ತಿದ್ದು ಈ ಬಾರಿ ಒಂದು ವಾರದ ಮುಂಚೆಯೇ ಆರಂಭವಾಗಿದೆ. 2009ರಲ್ಲಿ ಮೇ 25ರಂದು ಕೇರಳಕ್ಕೆ ಮುಂಗಾರು ಪ್ರವೇಶವಾಗಿತ್ತು. ಹದಿನಾರು ವರ್ಷಗಳ ಹಿಂದೆ ಒಂದು ವಾರ ಮುಂಚೆ ಮುಂಗಾರು ಪ್ರವೇಶವಾಗಿತ್ತು.
ವಿಶೇಷವೆಂದರೆ, ಕೇರಳಕ್ಕೆ ಪ್ರವೇಶಿಸಿ 3-4 ದಿನಗಳಲ್ಲಿ ರಾಜ್ಯಕ್ಕೆ ಆಗಮಿಸುತ್ತಿದ್ದ ಮುಂಗಾರು, ಈ ಬಾರಿ ಒಂದೇ ದಿನದಲ್ಲೇ ಕರ್ನಾಟಕದ ಕರಾವಳಿಗೂ ತಲುಪಿದೆ. ಮೇ 26ರ ಒಳಗೆ ಕರ್ನಾಟಕದ ಇತರ ಪ್ರದೇಶಗಳಿಗೂ ವ್ಯಾಪಿಸಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಮತ್ತು ವಿಜ್ಞಾನಿ ಸಿ.ಎಸ್. ಪಾಟೀಲ್ ಅವರು ತಿಳಿಸಿದ್ದಾರೆ.