ಮೈಸೂರು: ಮೈಸೂರು ನ್ಯೂ ಗೂಡ್ಸ್ ಟರ್ಮಿನಲ್ ಮತ್ತು ನಾಗನಹಳ್ಳಿ ನಡುವೆ ರಸ್ತೆ ಕೆಳಸೇತುವೆ ಕಾಮಗಾರಿ ನಡೆಯುವುದರಿಂದ ಕೆಳಗಿನಂತೆ ರೈಲು ಸೇವೆಗಳು ನಿಯಂತ್ರಣ, ಮರುನಿಗದಿ ಮತ್ತು ಭಾಗಶಃ ರದ್ದುಗೊಳ್ಳಲ್ಲಿದೆ.
1. ರೈಲು ಸಂ. 16552 ಅಶೋಕಪುರಂ – ಎಂ.ಜಿ.ಆರ್ ಚೆನ್ನೈ ಸೆಂಟ್ರಲ್ ಎಕ್ಸಪ್ರೆಸ್ 12, 14 ನವೆಂಬರ್, 3, 5, 10, 12, 31 ಡಿಸೆಂಬರ್ 2025, 2 ಜನವರಿ 2026 ರಂದು ಪ್ರಯಾಣ ಪ್ರಾರಂಭಿಸುವ ಈ ರೈಲು ಅಶೋಕಪುರಂ ನಿಂದ 40 ನಿಮಿಷ ತಡವಾಗಿ ಹೊರಡಲಿದೆ.
2. ರೈಲು ಸಂ. 16586 ಮುರ್ಡೇಶ್ವರ – ಕೆ.ಎಸ್.ಆರ್ ಬೆಂಗಳೂರು ಎಕ್ಸಪ್ರೆಸ್ 11, 13 ನವೆಂಬರ್, 2, 4, 9, 11, 30 ಡಿಸೆಂಬರ್ 2025, 1 ಜನವರಿ 2026 ರಂದು ಪ್ರಯಾಣ ಪ್ರಾರಂಭಿಸುವ ಈ ರೈಲು ಮಾರ್ಗಮಧ್ಯೆ 90 ನಿಮಿಷ ನಿಯಂತ್ರಿಸಲ್ಪಡಲಿದೆ.
3. ರೈಲು ಸಂ. 06270 ಎಸ್ಎಂವಿಟಿ ಬೆಂಗಳೂರು – ಮೈಸೂರು ಪ್ಯಾಸೆಂಜರ್ 11, 13 ನವೆಂಬರ್, 2, 4, 9, 11, 30 ಡಿಸೆಂಬರ್ 2025, 1 ಜನವರಿ 2026 ರಂದು ಪ್ರಯಾಣ ಪ್ರಾರಂಭಿಸುವ ಈ ರೈಲು ಮಾರ್ಗಮಧ್ಯೆ 100 ನಿಮಿಷ ನಿಯಂತ್ರಿಸಲ್ಪಡಲಿದೆ.
4. ರೈಲು ಸಂಖ್ಯೆ 66579 ಕೆ.ಎಸ್.ಆರ್. ಬೆಂಗಳೂರು – ಅಶೋಕಪುರಂ ಮೆಮು ರೈಲು 12, 14 ನವೆಂಬರ್, 3, 5, 10, 12, 31 ಡಿಸೆಂಬರ್ 2025, 2 ಜನವರಿ 2026 ರಂದು ಪ್ರಯಾಣ ಪ್ರಾರಂಭಿಸುವ ಈ ರೈಲು ಪಾಂಡವಪುರ ಮತ್ತು ಅಶೋಕಪುರಂ ನಡುವಿನ ಮಾರ್ಗದಲ್ಲಿ ಭಾಗಶಃ ರದ್ದುಗೊಳಿಸಲಾಗುತ್ತದೆ. ಈ ರೈಲು ಪಾಂಡವಪುರದಲ್ಲೇ ತನ್ನ ಪ್ರಯಾಣ ಕೊನೆಗೊಳಿಸಿದೆ.
5. ರೈಲು ಸಂಖ್ಯೆ 66554 ಅಶೋಕಪುರಂ – ಕೆ.ಎಸ್.ಆರ್. ಬೆಂಗಳೂರು ಮೆಮು ರೈಲು 12, 14 ನವೆಂಬರ್, 3, 5, 10, 12, 31 ಡಿಸೆಂಬರ್ 2025, 2 ಜನವರಿ 2026 ರಂದು ಪ್ರಯಾಣ ಪ್ರಾರಂಭಿಸುವ ಈ ರೈಲು ಅಶೋಕಪುರಂ ಮತ್ತು ಪಾಂಡವಪುರ ನಡುವಿನ ಮಾರ್ಗದಲ್ಲಿ ಭಾಗಶಃ ರದ್ದುಗೊಳ್ಳಲ್ಲಿದೆ. ಈ ರೈಲು ಅಶೋಕಪುರಂ ಬದಲು ಪಾಂಡವಪುರದಿಂದ ನಿಗದಿತ ಸಮಯದಲ್ಲಿ ಹೊರಡಲಿದೆ.
BREAKING: ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ: ಜೈಲು ಸೂಪರಿಂಟೆಂಡೆಂಟ್, ಎಎಸ್ಪಿ ಸಸ್ಪೆಂಡ್
ನೀವು ಕಾನೂನ ಬದ್ಧವಾಗಿ ಮಕ್ಕಳನ್ನು ‘ದತ್ತು’ ಪಡೆಯುವುದು ಹೇಗೆ? ದಾಖಲೆಗಳೇನು? ಇಲ್ಲಿದೆ ಮಾಹಿತಿ








