ಬೆಂಗಳೂರು: ರೈಲ್ವೆ ಕಾಮಗಾರಿ ಸೇರಿದಂತೆ ವಿವಿಧ ಕಾರಣಗಳಿಂದಾಗಿ ನೈರುತ್ಯ ರೈಲ್ವೆಯಿಂದ ಕೆಲ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಅಲ್ಲದೇ ಕೆಲವು ರೈಲುಗಳ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹುಬ್ಬಳ್ಳಿಯ ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.
ಈ ರೈಲುಗಳ ಸಂಚಾರ ಭಾಗಶಃ ರದ್ದು
ಹೊಸಪೇಟೆ ನಿಲ್ದಾಣದಲ್ಲಿ ಸುರಕ್ಷತಗೆ ಸಂಬಂಧಿತ ಕಾಮಗಾರಿ ಕೈಗೊಳ್ಳುವುದರಿಂದ ಕೊಪ್ಪಳ ಮತ್ತು ಹೊಸಪೇಟೆ ನಿಲ್ದಾಣಗಳ ನಡುವೆ ಈ ಕೆಳಗಿನ ರೈಲುಗಳ ಸಂಚಾರವನ್ನು ಭಾಗಶಃ ರದ್ದುಪಡಿಸಲಾಗುತ್ತಿದೆ.
ಮೇ 14 ರಂದು ರೈಲು ಸಂಖ್ಯೆ 11305 ಸೋಲಾಪುರ-ಹೊಸಪೇಟೆ ಡೈಲಿ ಎಕ್ಸ್‌ಪ್ರೆಸ್ ರೈಲು ಕೊಪ್ಪಳ-ಹೊಸಪೇಟೆ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಹೊಸಪೇಟೆ ಬದಲು ಕೊಪ್ಪಳ ನಿಲ್ದಾಣದಲ್ಲಿ ತನ್ನ ಸೇವೆ ಕೊನೆಗೊಳ್ಳಲಿದೆ.
ಮೇ 15 ರಂದು ರೈಲು ಸಂಖ್ಯೆ 11306 ಹೊಸಪೇಟೆ-ಸೋಲಾಪುರ ಡೈಲಿ ಎಕ್ಸ್‌ಪ್ರೆಸ್ ರೈಲು ಹೊಸಪೇಟೆ ಬದಲು ಕೊಪ್ಪಳ ನಿಲ್ದಾಣದಿಂದ ಪ್ರಾರಂಭವಾಗಲಿದ್ದು. ಈ ರೈಲು ಹೊಸಪೇಟೆ-ಕೊಪ್ಪಳ ನಿಲ್ದಾಣಗಳ ನಡುವಿನ ಪ್ರಯಾಣ ರದ್ದುಪಡಿಸಲಾಗಿದೆ.
ಈ ಡೆಮು ಸ್ಪೆಷಲ್ ರೈಲಿನ ಮಾರ್ಗ ಬದಲಾವಣೆ
ಗುಂತಕಲ್ ಯಾರ್ಡ್ ನಲ್ಲಿ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ಕೈಗೊಳ್ಳುವುದರಿಂದ ಮೇ 9 ರಿಂದ 23, 2024 ರವರೆಗೆ ಹಿಂದೂಪುರ ಮತ್ತು ಗುಂತಕಲ್ ನಿಲ್ದಾಣಗಳ ನಡುವೆ ಸಂಚರಿಸುವ ಡೆಮು ಸ್ಪೆಷಲ್ (ರೈ.ಸಂ.07694) ರೈಲನ್ನು ಖಾದರ್ ಪೇಟ, ಇಮಾಮ್ಪುರಂ, ವೆಂಕಟಂಪಲ್ಲಿ, ಗುಲಪಾಳ್ಯಮು ಮತ್ತು ಹನುಮಾನ್ ಸರ್ಕಲ್ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಪಾಮಿಡಿ – ತಿಮ್ಮನಚೆರ್ಲಾ ನಿಲ್ದಾಣಗಳ ನಡುವೆ ನಿಲುಗಡೆ ಇರುವುದಿಲ್ಲ ಎಂದು ದಕ್ಷಿಣ ಮಧ್ಯ ರೈಲ್ವೆಯು ಸೂಚಿಸಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಈ ಖಾದರ್ ಪೇಟ, ಇಮಾಮ್ಪುರಂ, ವೆಂಕಟಂಪಲ್ಲಿ, ಗುಲಪಾಳ್ಯಮು ಮತ್ತು ಹನುಮಾನ್ ಸರ್ಕಲ್ ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆಯನ್ನು ಒದಗಿಸಲಾಗಿದೆ.
ಈ ರೈಲುಗಳ ಮಾರ್ಗ ಬದಲಾವಣೆ
ವಿಜಯವಾಡ ವಿಭಾಗದ ಮುಸ್ತಾಬಾದ-ಗನ್ನವರಂ ನಿಲ್ದಾಣಗಳ ನಡುವೆ ಹಳಿ ನಿರ್ವಹಣಾ ಕಾಮಗಾರಿ ಕೈಗೊಳ್ಳುವುದರಿಂದ ಈ ಕೆಳಗಿನ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗುತ್ತಿದೆ ಎಂದು ದಕ್ಷಿಣ ಮಧ್ಯ ರೈಲ್ವೆಯು ಸೂಚಿಸಿದೆ.
ಮೇ 14, 21 ಮತ್ತು 28 ರಂದು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 06521 ಎಸ್ಎಂವಿಟಿ ಬೆಂಗಳೂರು-ಗುವಾಹಟಿ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು ವಿಜಯವಾಡ, ಗುಡಿವಾಡ, ಭೀಮಾವರಂ ಟೌನ್ ಮತ್ತು ನಿಡದವೊಲು ನಿಲ್ದಾಣಗಳ ಮೂಲಕ ಸಂಚರಿಸಲಿದೆ.
ಮೇ 17 ಮತ್ತು 24 ರಂದು ಗುವಾಹಟಿಯಿಂದ ಹೊರಡುವ ರೈಲು ಸಂಖ್ಯೆ 12509 ಗುವಾಹಟಿ-ಎಸ್ಎಂವಿಟಿ ಬೆಂಗಳೂರು ಟ್ರೈ ವೀಕ್ಲಿ ಎಕ್ಸ್ ಪ್ರೆಸ್ ರೈಲು ವಿಜಯವಾಡ, ಗುಡಿವಾಡ, ಭೀಮಾವರಂ ಟೌನ್ ಮತ್ತು ನಿಡದವೊಲು ನಿಲ್ದಾಣಗಳ ಮೂಲಕ ಸಂಚರಿಸಲಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ರೈತರಿಗೆ ಗುಡ್ ನ್ಯೂಸ್: ಖಾತೆಗೆ ಸಂಪೂರ್ಣ ಬೆಳೆಹಾನಿ ಪರಿಹಾರ ಜಮಾ: ಸಚಿವ ಕೃಷ್ಣಭೈರೇಗೌಡ
ನಿಮ್ಮ ‘ಏರ್ ಇಂಡಿಯಾ ಎಕ್ಸ್ಪ್ರೆಸ್’ ವಿಮಾನ ರದ್ದಾಗಿದ್ಯಾ? ಮರುಪಾವತಿ ಪಡೆಯಲು ಈ ‘ವಾಟ್ಸಾಪ್ ಸಂಖ್ಯೆ’ ಸಂಪರ್ಕಿಸಿ