ನವದೆಹಲಿ : ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ರೈಲ್ವೆ ಸಚಿವಾಲಯದಲ್ಲಿ 9,144 ತಂತ್ರಜ್ಞರ ಹುದ್ದೆಗಳ ನೇಮಕಾತಿಗೆ ಅರ್ಜಿ ಪ್ರಕ್ರಿಯೆ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 8ರ ರಾತ್ರಿ 11.59 ರವರೆಗೆ ಅರ್ಜಿ ಸಲ್ಲಿಸಬಹುದು. ದೇಶಾದ್ಯಂತ 21 RRBಗಳ ಮೂಲಕ ಭರ್ತಿ ಮಾಡಲಿರುವ ಉದ್ಯೋಗ ಅಧಿಸೂಚನೆಯ ಕೆಲವು ಮುಖ್ಯಾಂಶಗಳು ಇಲ್ಲಿವೆ.
ಅಧಿಸೂಚನೆಯ ಕೆಲವು ಮುಖ್ಯಾಂಶಗಳು ಇಲ್ಲಿವೆ.!
ಹುದ್ದೆಗಳ ವಿವರ : ಒಟ್ಟು 9,144 ಹುದ್ದೆಗಳು ಖಾಲಿ ಇದ್ದು, ಈ ಪೈಕಿ 1092 ಹುದ್ದೆಗಳು ಟೆಕ್ನಿಷಿಯನ್ ಗ್ರೇಡ್-1 ಸಿಗ್ನಲ್’ಗೆ ಮೀಸಲಾಗಿವೆ. ಟೆಕ್ನಿಷಿಯನ್ ಗ್ರೇಡ್ 3 ಹುದ್ದೆಗಳು 8,052
ವಯೋಮಿತಿ : ಜುಲೈ 1, 2024ಕ್ಕೆ ಅನ್ವಯವಾಗುವಂತೆ ಟೆಕ್ನಿಷಿಯನ್ ಗ್ರೇಡ್ 1 ಸಿಗ್ನಲ್ ಹುದ್ದೆಗಳಿಗೆ 18 ರಿಂದ 36 ವರ್ಷ. ಗ್ರೇಡ್-3 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 18 ರಿಂದ 33 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಎಸ್ಸಿ/ಎಸ್ಟಿ, ಒಬಿಸಿ, ಮಾಜಿ ಸೈನಿಕರು/ಅಂಗವಿಕಲರು. ಆಯಾ ವರ್ಗಗಳಿಗೆ ವಯಸ್ಸಿನ ಸಡಿಲಿಕೆ ನೀಡಲಾಗಿದೆ.
ಅರ್ಜಿ ಶುಲ್ಕ : 500 ರೂಪಾಯಿ. ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನ ತೆಗೆದುಕೊಂಡ ನಂತರ 400 ರೂ.ಗಳನ್ನು ಮರುಪಾವತಿ ಮಾಡಲಾಗುತ್ತದೆ. ಎಸ್ಸಿ/ಎಸ್ಟಿ/ಮಾಜಿ ಸೈನಿಕರು/ಮಹಿಳೆಯರು/ತೃತೀಯ ಲಿಂಗಿಗಳು/ಅಲ್ಪಸಂಖ್ಯಾತರು/ಇಬಿಸಿಗಳು ತಲಾ 250 ರೂ.ಅರ್ಜಿ ಶುಲ್ಕವನ್ನ ಪಾವತಿಸಬೇಕು. ಪರೀಕ್ಷೆಯ ನಂತರ ಈ ಮೊತ್ತವನ್ನ ಮರುಪಾವತಿಸಲಾಗುತ್ತದೆ.
ಆಯ್ಕೆ ಪ್ರಕ್ರಿಯೆ : ಕಂಪ್ಯೂಟರ್ ಆಧಾರಿತ ಪರೀಕ್ಷೆ, ಡಾಕ್ಯುಮೆಂಟ್ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯ ಮೂಲಕ ಈ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ವೇತನ : ಟೆಕ್ನಿಷಿಯನ್ ಗ್ರೇಡ್ -1 ಸಿಗ್ನಲ್ ಹುದ್ದೆಗಳಿಗೆ, ಏಳನೇ ಸಿಪಿಸಿಯಲ್ಲಿ ಲೆವೆಲ್ -5ರ ಅಡಿಯಲ್ಲಿ ಆರಂಭಿಕ ವೇತನ 29,200 ರೂಪಾಯಿ. ಟೆಕ್ನಿಷಿಯನ್ ಗ್ರೇಡ್-3 ಹುದ್ದೆಗಳಿಗೆ ಲೆವೆಲ್-2ರ ಅಡಿಯಲ್ಲಿ ತಲಾ 19,990 ರೂಪಾಯಿ.
ಟೆಕ್ನಿಷಿಯನ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆ, ವಯಸ್ಸಿನ ಮಿತಿ, ವಲಯವಾರು ಹುದ್ದೆಗಳ ಸಂಖ್ಯೆ, ಪರೀಕ್ಷಾ ಮಾದರಿ, ಪಠ್ಯಕ್ರಮ ಇತ್ಯಾದಿಗಳ ಸಂಪೂರ್ಣ ವಿವರಗಳನ್ನ ಅಧಿಸೂಚನೆಯನ್ನ ಪಡೆಯಬಹುದು.
ಚುನಾವಣಾ ಆಯೋಗದಲ್ಲಿ ‘ಅಸಮಾಧಾನ’ ; ಕೇಂದ್ರ ಏಜೆನ್ಸಿಗಳ ವಿರುದ್ಧ ವಿಪಕ್ಷಗಳ ದೂರು, ಪ್ರತಿಕ್ರಿಯೆಗೆ ಚಿಂತನೆ
ಸುಳ್ಳುಗಳ ‘ಎಲೆಕ್ಟ್ರೊಲ್ ಬಾಂಡ್’ ಸರದಾರ ಅಮಿತ್ ಷಾ : ಕೇಂದ್ರ ಸಚಿವರ ವಿರುದ್ಧ ಕೃಷ್ಣ ಭೈರೇಗೌಡ ವಾಗ್ದಾಳಿ
“ಪ್ರಧಾನಿ ಮೋದಿಯವ್ರ ಬಲವಾದ ಗಡಿ ನೀತಿಯಿಂದ ಚೀನಾ ಕಿರಿಕಿರಿಗೊಂಡಿದೆ” : ಸಚಿವ ‘ಕಿರಣ್ ರಿಜಿಜು’