ಬೆಂಗಳೂರು: ಬೆಂಗಳೂರು ವಿಭಾಗದ ಪೆನುಕೊಂಡ – ಮಕ್ಕಾಜಿಪಲ್ಲಿ ಭಾಗದ ರೈಲ್ವೆ ಜೋಡಿ ಹಳಿ ಕಾಮಗಾರಿ ಕೈಗೊಳ್ಳುವುದರಿಂದ, ಈ ಕೆಳಗಿನ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಮತ್ತು ಭಾಗಶಃ ರದ್ದುಗೊಳಿಸಲಾಗಿದೆ. ಅವುಗಳ ವಿವರಗಳು ಈ ಕೆಳಗಿನಂತಿವೆ:
ರೈಲುಗಳ ಸಂಚಾರ ರದ್ದು:
ಫೆಬ್ರವರಿ 25 ರಿಂದ 28, 2025 ರವರೆಗೆ ರೈಲು ಸಂಖ್ಯೆ 66559 ಕೆಎಸ್ಆರ್ ಬೆಂಗಳೂರು-ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ ಮೆಮು ಮತ್ತು ರೈಲು ಸಂಖ್ಯೆ 66560 ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ-ಕೆಎಸ್ಆರ್ ಬೆಂಗಳೂರು ಮೆಮು ರೈಲುಗಳ ಪ್ರಯಾಣವನ್ನು ತಾತ್ಕಾಲಿಕವಾಗಿ ರದ್ದು ರದ್ದುಗೊಳಿಸಲಾಗಿದೆ.
ಫೆಬ್ರವರಿ 25 ರಿಂದ 27, 2025 ರವರೆಗೆ ರೈಲು ಸಂಖ್ಯೆ 77213 ಗುಂತಕಲ್-ಹಿಂದೂಪುರ ಡೆಮು ಮತ್ತು ಫೆಬ್ರವರಿ 26, 2025 ರಿಂದ ಫೆಬ್ರವರಿ 28, 2025 ರವರೆಗೆ ರೈಲು ಸಂಖ್ಯೆ 77214 ಹಿಂದೂಪುರ-ಗುಂತಕಲ್ ಡೆಮು ರೈಲುಗಳ ಸಂಚಾರ ತಾತ್ಕಾಲಿಕವಾಗಿ ರದ್ದಾಗಲಿವೆ.
ರೈಲುಗಳ ಸಂಚಾರ ಭಾಗಶಃ ರದ್ದು:
ಫೆಬ್ರವರಿ 25 ರಿಂದ 28, 2025 ರವರೆಗೆ ರೈಲು ಸಂಖ್ಯೆ 06595 ಕೆಎಸ್ಆರ್ ಬೆಂಗಳೂರು-ಧರ್ಮಾವರಂ ಮೆಮು ಸ್ಪೆಷಲ್ ರೈಲು ಹಿಂದೂಪುರ ಮತ್ತು ಧರ್ಮಾವರಂ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ. ಈ ರೈಲು ಹಿಂದೂಪುರದಲ್ಲಿ ಕೊನೆಗೊಳ್ಳುತ್ತದೆ.
ಫೆಬ್ರವರಿ 25 ರಿಂದ 28, 2025 ರವರೆಗೆ ರೈಲು ಸಂಖ್ಯೆ 06596 ಧರ್ಮಾವರಂ-ಕೆಎಸ್ಆರ್ ಬೆಂಗಳೂರು ಮೆಮು ಸ್ಪೆಷಲ್ ರೈಲು ಧರ್ಮಾವರಂ ನಿಲ್ದಾಣದ ಬದಲು ಹಿಂದೂಪುರದಿಂದ ತನ್ನ ನಿಗದಿತ ಸಮಯಕ್ಕೆ ಹೊರಡಲಿದೆ. ಧರ್ಮಾವರಂ ಮತ್ತು ಹಿಂದೂಪುರ ನಿಲ್ದಾಣಗಳ ನಡುವಿನ ಪ್ರಯಾಣವು ಭಾಗಶಃ ರದ್ದಾಗಿದೆ.
GOOD NEWS: ರಾಜ್ಯದ ದೇವಸ್ಥಾನಗಳ ನೌಕರರಿಗೆ ಖುಷಿಸುದ್ದಿ: ಇನ್ಮುಂದೆ ಸಂಚಿತ ನಿಧಿಯಿಂದಲೇ ವೇತನ ಪಾವತಿ
BREAKING : ರಾಜ್ಯದ ವಾಹನ ಸವಾರರಿಗೆ ಗುಡ್ ನ್ಯೂಸ್ : ‘HSRP’ ನಂಬರ್ ಪ್ಲೇಟ್ ಅಳವಡಿಕೆ ಮಾ.31ರವರೆಗೆ ವಿಸ್ತರಣೆ
BREAKING : ಬೆಂಗಳೂರಲ್ಲಿ ‘RTO’ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ : 100ಕ್ಕೂ ಹೆಚ್ಚು ಶಾಲಾ ವಾಹನಗಳು ಸೀಜ್!