ಕೋಲ್ಕತ್ತಾ: ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪಾರ್ಥ ಚಟರ್ಜಿಗೆ ಸೇರಿದ ದಕ್ಷಿಣ ಕೋಲ್ಕತ್ತಾದ ಅಪಾರ್ಟ್‌ಮೆಂಟ್‌ನಲ್ಲಿ ಜಾರಿ ನಿರ್ದೇಶನಾಲಯ ಇಂದು ಶೋಧ ನಡೆಸುತ್ತಿದೆ.

ಫೋರ್ಟ್ ಓಯಸಿಸ್ ಕಾಂಪ್ಲೆಕ್ಸ್‌ನಲ್ಲಿರುವ ಅಪಾರ್ಟ್‌ಮೆಂಟ್​ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜುಲೈ 23 ರಂದು ಪಾರ್ಥ ಚಟರ್ಜಿ ಮತ್ತು ಅವರ ಆಪ್ತೆ ಅರ್ಪಿತಾ ಮುಖರ್ಜಿಯನ್ನು ಬಂಧಿಸಿದೆ. ಇದಾದ ಬಳಿಕ ಕೋಲ್ಕತ್ತಾದಾದ್ಯಂತ ಮುಖರ್ಜಿಗೆ ಸಂಬಂಧಿಸಿದ ಫ್ಲ್ಯಾಟ್‌ಗಳ ಮೇಲೆ ಅನೇಕ ದಾಳಿಗಳು ನಡೆದಿವೆ. ಇದರಲ್ಲಿ ಸುಮಾರು 50 ಕೋಟಿ ನಗದನ್ನು ವಶಪಡಿಸಿಕೊಳ್ಳಲಾಗಿದೆ.

Big Breaking news:‌ ಸುಪ್ರೀಂನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ʻಯುಯು ಲಲಿತ್ʼ ಹೆಸರು ಶಿಪಾರಸ್ಸು ಮಾಡಿದ ʻಸಿಜೆಐ ರಮಣʼ!

2016 ರಲ್ಲಿ ತೃಣಮೂಲ ಕಾಂಗ್ರೆಸ್ ನಾಯಕರಾಗಿದ್ದ ಚಟರ್ಜಿಯವರು ಶಿಕ್ಷಣ ಸಚಿವರಾಗಿದ್ದರು. ಈ ವೇಳೆ ಶಿಕ್ಷಕರು ಮತ್ತು ಇತರ ಸಿಬ್ಬಂದಿಯ ನೇಮಕಾತಿಗಾಗಿ ಅಪಾರ ಪ್ರಮಾಣದ ಹಣವನ್ನು ಪಡೆದಿದ್ದಾರೆ ತನಿಖಾ ಸಂಸ್ಥೆ ಹೇಳಿಕೊಂಡಿದೆ.

ಹಗರಣದ ಬಳಿಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಪಾರ್ಥ ಚಟರ್ಜಿ ಅವರನ್ನು ಪಕ್ಷದಿಂದ ವಜಾಗೊಳಿಸಿದ್ದರು. ಇತ್ತ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಇಡಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಪಕ್ಷವು ಆರೋಪಿಸಿದ್ದು, ಕಾಲಮಿತಿಯ ತನಿಖೆಗೆ ಒತ್ತಾಯಿಸಿದೆ.

BIGG NEWS: ಅಪ್ಪು ನೆನಪಿಗಾಗಿ ನಾಳೆಯಿಂದ ಲಾಲ್‌ ಬಾಗ್‌ ನಲ್ಲಿ ಫ್ಲವರ್ ಶೋ..! ವಿವಿಧ ಆಕೃತಿಯ ಹೂವುಗಳಿಂದ ಸಿಂಗಾರ

Share.
Exit mobile version