ಬೆಂಗಳೂರು: ಡಾ. ಪುನೀತ್‌ ರಾಜ್‌ ಕುಮಾರ್‌ ನಮ್ಮನ್ನೆಲ್ಲ ಅಗಲಿ ಹತ್ತು ತಿಂಗಳು ಕಳೆದಿದೆ. ಆದ್ರೂ ಕೂಡ ಅವರ ನೆನಪು ಮಾತ್ರ ಅಚ್ಚಳಿಯದೆ ಉಳಿದಿದೆ. ಈಗಾಗಲೇ ಅಭಿಮಾನಿಗಳು ಸಹ ಅವರ ನೆನಪಿಗಾಗಿ ಸಾಕಷ್ಟು ಸಮಾಜ ಮುಖಿ ಕಾರ್ಯಗಳನ್ನು ಇಂದಿಗೂ ಮಾಡಿಕೊಂಡು ಬರುತ್ತಿದ್ದಾರೆ. ಹೀಗಾಗಿ ಈ ಬಾರಿ ಅವರ ನೆನಪಿಗಾಗಿ ನಾಳೆಯಿಂದ 10 ದಿನಗಳ ಕಾಲ ಲಾಲ್‌ಬಾಗ್‌ನಲ್ಲಿ  ಫ್ಲವರ್ ಶೋ ಅನಾವರಣಗೊಳ್ಳಲಿದೆ.

BIGG BREAKING NEWS: ದೇಶದಲ್ಲಿ ಮತ್ತೆ ಏರಿಕೆ ಕಂಡ ಕೊರೊನಾ; ಕಳೆದ 24 ಗಂಟೆಗಳಲ್ಲಿ 19,893 ಹೊಸ ಪ್ರಕರಣಗಳು ಪತ್ತೆ

 

10 ಲಕ್ಷಕ್ಕೂ ಹೆಚ್ಚು ಹೂವುಗಳಿಂದ ವಿವಿಧ ಆಕೃತಿಗಳನ್ನು ಸಿಂಗರಿಸಲಾಗಿದೆ.ಗಾಜಿನಮನೆಯಲ್ಲಿ ಮೈಸೂರಿನ ಶಕ್ತಿಧಾಮ, ಗಾಜನೂರು ಮನೆ, ಡಾ.ರಾಜ್, ಡಾ.ಪುನೀತ್ ರಾಜ್‌ಕುಮಾರ್ ಪ್ರತಿಮೆಗಳನ್ನು ಪುಷ್ಪಗಳಲ್ಲಿ ಅರಳಿಸಲಾಗಿದೆ. ನಾಳೆಯಿಂದ ಆಗಸ್ಟ್ 15ರ ವರೆಗೂ ಫಲಪುಷ್ಪ ಪ್ರದರ್ಶನ ಇರಲಿದ್ದು, ಪ್ರತಿದಿನ ನಿತ್ಯ 12 ಗಂಟೆಗಳ ಕಾಲ ಸಾರ್ವಜನಿಕರ ವೀಕ್ಷಣೆಗೆ ಅವಕಾಶವಿರಲಿದೆ.

Share.
Exit mobile version