ರಾಯಚೂರು: ಜಿಲ್ಲೆಯಲ್ಲಿ ಧಾರುಣ ಘಟನೆಯೊಂದು ಜರುಗಿದೆ. ಹೊಲದ ಬದುವಿನಲ್ಲಿ ಹಾಕಿದ್ದಂತ ಕಲ್ಲಿನ ಬಂಡೆಯೊಂದು ಉಳುರಿ ಬಿದ್ದು ಇಬ್ಬರು ಮಕ್ಕಳು ದುರ್ಮರಣಹೊಂದಿದ್ದರೇ, ಓರ್ವ ಮಗುವಿನ ಕಾಲು ಮುರಿದಿರುವಂತ ಘಟನೆ ನಡೆದಿದೆ.
ರಾಯಚೂರು ಜಿಲ್ಲೆಯ ಲಿಂಗಸೂರು ತಾಲ್ಲೂಕಿನ ಗೌಡಹಳ್ಳಿಯ ತಾಂಡಾದಲ್ಲಿ ಇಂದು ಈ ದುರ್ಘಟನೆ ನಡೆದಿದೆ. ಶಾಲೆಗಳಿಗೆ ರಜೆಯಿದ್ದ ಕಾರಣ, ಮಕ್ಕಳನ್ನು ತಮ್ಮ ಹೊಲಕ್ಕೆ ಲಚ್ಚಪ್ಪ ಎಂಬುವರು ಕರೆದೊಯ್ದಿದ್ದರು.
ಜಮೀನಿನಲ್ಲಿದ್ದಂತ ಕಲ್ಲುಗಳನ್ನು ಕೀಳಿಸಿ ಬದುವಿನ ಮೇಲೆ ಹಾಕಲಾಗಿತ್ತು. ಇಂತಹ ಕಲ್ಲುಗಳನ್ನು ಸುತ್ತುವರೆಯುವಂತ ಆಟ ಆಡುತ್ತಿದ್ದಂತ ವೇಳೆಯಲ್ಲಿ ಕಲ್ಲು ಬಂಡೆ ಉರುಳಿ ಸ್ಥಳದಲ್ಲೇ ಮಂಜುನಾಥ್(9) ಹಾಗೂ ವೈಶಾಲಿ(8) ಎಂಬ ಮಕ್ಕಳು ಸಾವನ್ನಪ್ಪಿದ್ದಾವೆ. ಮತ್ತೊಂದು ಮಗು 7 ವರ್ಷದ ರಘು ಕಾಲು ಮುರಿದಿದೆ. ಈ ಸಂಬಂಧ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದಲ್ಲಿ ಯಾರು ಬಾಂಬ್, ಬೆಂಕಿ ಹಾಕ್ತಾರೋ ದೇಶಪ್ರೇಮಿಗಳು: ಛಲವಾಧಿ ನಾರಾಯಣಸ್ವಾಮಿ ಕಿಡಿ
BIG BREAKING: ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕ ಮುನಿರತ್ನಗೆ ಜಾಮೀನು ಮಂಜೂರು