ರಾಯಚೂರು : ಹುಚ್ಚುನಾಯಿ ದಾಳಿಯಿಂದ ಮೂವರುರು ಮಕ್ಕಳಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ರಾಯಚೂರು ಜಿಲ್ಲೆಯ ಯಾರಗೇರಾ ಗ್ರಾಮದಲ್ಲಿ ನಡೆದಿದೆ.ತಕ್ಷಣ ಮಕ್ಕಳನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತೆ ನೀಡಲಾಗುತ್ತಿದೆ.
ಹೌದು ಯಾರಗೇರಾ ಗ್ರಾಮದಲ್ಲಿ ಪಾವನಿ, ಅಸಿಯಾ, ಅನ್ಸಿಯ ಎಂಬ ಮಕ್ಕಳ ಮೇಲೆ ಹುಚ್ಚುನಾಯಿ ದಾಳಿ ನಡೆಸಿದೆ. ಮಧ್ಯಾಹ್ನದಲ್ಲಿ ಮನೆಯ ಬಳಿ ಮಕ್ಕಳು ಆಟವಾಡುತ್ತಿದ್ದಾಗ ಹುಚ್ಚುನಾಯಿ ಕಚ್ಚಿದೆ.ಈ ವೇಳೆ ಗಾಯಗೊಂಡ ಮೂವರು ಮಕ್ಕಳನ್ನು ತಕ್ಷಣ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಕ್ಕಳಿಗೆ ಕಚ್ಚಿ ನಂತರ ಜಾನುವಾರುಗಳ ಮೇಲು ಹುಚ್ಚುನಾಯಿ ದಾಳಿ ಮಾಡಿದೆ ಈ ವೇಳೆ ಗ್ರಾಮಸ್ಥರು ರಚ್ಚು ಗೆದ್ದು ಹುಚ್ಚುನಾಯಿಯನ್ನು ಕೊಂದು ಹಾಕಿದ್ದಾರೆ ಯರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.