ರಾಯಚೂರು : ಹಳ್ಳ ದಾಟುತ್ತಿದ್ದ ವೇಳೆ ಮಳೆಯ ನೀರಿನ ರಭಸಕ್ಕೆ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಬ್ಯಾಂಕ್ ಸಿಬ್ಬಂದಿಯ ಮೃತ ದೇಹ ಇದೀಗ ಪತ್ತೆಯಾಗಿದೆ. ಮೃತನನ್ನು ರಾಯಚೂರು ತಾಲೂಕಿನ ಫತ್ತೆಪುರ ಗ್ರಾಮದ HDFC ಬ್ಯಾಂಕ್ ಸಿಬ್ಬಂದಿ ಬಸವರಾಜು (33) ಎಂದು ತಿಳಿದುಬಂದಿದೆ. ಕಳೆದ ಸೆಪ್ಟೆಂಬರ್ 3ರಂದು ರಾತ್ರಿ ಹಳ್ಳ ದಾಟುತ್ತಿದ್ದಾಗ ಬಸವರಾಜು ಕೊಚ್ಚಿ ಹೋಗಿದ್ದ.
ಭಾರಿ ಮಳೆಯಿಂದಾಗಿ ಹೆಚ್ಚಿನ ನೀರಿನ ರಭಸದಿಂದ ಬಸವರಾಜು ಕೊಚ್ಚಿ ಹೋಗಿದ್ದ, ರಾಯಚೂರು ತಾಲೂಕಿನ ಫತ್ತೆಪುರ ಗ್ರಾಮದಿಂದ ಒಂದುವರೆ ಕಿಲೋಮೀಟರ್ ದೂರದಲ್ಲಿ ಇದೀಗ ಬಸವರಾಜುವಿನ ಮೃತ ದೇಹ ಪತ್ತೆಯಾಗಿದೆ. ಎನ್ ಡಿ ಆರ್ ಎಫ್, ಅಗ್ನಿಶಾಮಕದಳ ಪೊಲೀಸರ ಹುಡುಕಾಟ ವೇಳೆ ಪತ್ತೆಯಾಗಿದೆ. ಈ ಕುರಿತು ರಾಯಚೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.