ರಾಯಚೂರು : ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಲೇಡೀಸ್ ಹಾಸ್ಟೆಲ್ ನಲ್ಲಿ ರಾಗಿಂಗ್ ನಡೆದಿದ್ದು, ಜೂನಿಯರ್ ವಿದ್ಯಾರ್ಥಿನಿಯರನ್ನು ಸೀನಿಯರ್ ವಿದ್ಯಾರ್ಥಿಗಳು ರೂಮಿನಲ್ಲಿ ಕೂಡಿಹಾಕಿ ಹಲ್ಲೆ ನಡೆಸಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ ನಲ್ಲಿ ಈ ಘಟನೆ ನಡೆದಿದೆ.
ಮಂಡ್ಯದಲ್ಲಿ ‘ಕೊಂಡೋತ್ಸವ’ದ ವೇಳೆ ಘೋರ ದುರಂತ: ಕೊಂಡಕ್ಕೆ ಬಿದ್ದು ‘ಪೂಜಾರಿ’ಗೆ ತೀವ್ರ ಗಾಯ
ಹಾಸ್ಟೆಲ್ ನಲ್ಲಿ ಬಿ ಎಡ್ ವಿದ್ಯಾರ್ಥಿನಿಯರು ಕೂಡ ಇದ್ದಿದ್ದು ಈ ವೇಳೆ ಕುಡಿಯುವ ನೀರಿನ ಬಕೆಟ್ ಗೆ ಅವರು ಜಗ್ ಹಾಕಿದ್ದಾರೆ. ಇದರಿಂದ ಕುಪಿತಗೊಂಡ ಪಿಯುಸಿ ವಿದ್ಯಾರ್ಥಿ ಕುಡಿಯುವ ನೀರಿನ ಬಗ್ಗೆ ಹಾಕಬೇಡಿ ಎಂದು ಸೀನಿಯರ್ ವಿದ್ಯಾರ್ಥಿನಿಯರಿಗೆ ಪ್ರಶ್ನೆ ಮಾಡಿದ್ದಾಳೆ.
ಕೊಡಗು : ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ದಾಖಲೆ ಇಲ್ಲದ ‘5 ಲಕ್ಷ’ ರೂಪಾಯಿ ವಶ
ಇದೇ ವಿಚಾರಕ್ಕಾಗಿ ಪಿಯುಸಿ ವಿದ್ಯಾರ್ಥಿನಿ ಮೇಲೆ ಐದು ಸಿನಿಯರ್ಸ್ ನಿಂದ ಹಲ್ಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಸದ್ಯ ಗಾಯಾಳು ವಿದ್ಯಾರ್ಥಿನಿಗೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.