ರಾಯಚೂರು: ಜಿಲ್ಲೆಯಲ್ಲಿ ಕೂಲಿ ಕಾರ್ಮಿಕ ಬಡ ಕುಟುಂಬದ ಮಹಿಳೆಯೊಬ್ಬರ ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ 2000 ರೂ ಲಂಚಕ್ಕೆ ಬೇಡಿಕೆಯಿಟ್ಟಂತ ಘಟನೆ ನಡೆದಿದೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕೆಂಗಲ್ ಗ್ರಾಮದ ಅಂಬಮ್ಮ ಎಂಬುವರು ಮೂರ್ಛೆ ರೋಗದಿಂದ ಬಳಲುತ್ತಿದ್ದರು. ಅವರನ್ನು ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು.
ಆಸ್ಪತ್ರೆಯಲ್ಲಿ ಮೂರ್ಛೆ ರೋಗದಿಂದ ಬಳಲುತ್ತಿದ್ದಂತ ಅವರು ಸಾವನ್ನಪ್ಪಿದ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಹೀಗೆ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯ ಪಾರ್ಥೀವ ಶರೀರದ ಮರಣೋತ್ತರ ಪರೀಕ್ಷೆಗೆ ಅಲ್ಲಿನ ಸಿಬ್ಬಂದಿಯಾಗಿದ್ದಂತ ಮಂಜುನಾಥ್ ಎಂಬುವರು 2000 ರೂ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ.
ಕೂಲಿ ಕಾರ್ಮಿಕರಾಗಿದ್ದಂತ ಬಡ ಕಾರ್ಮಿಕ ಕುಟುಂಬದವರು ರೂ.1500 ಲಂಚವನ್ನು ನೀಡಿದ್ದಾರೆ. ಆದರೇ ಹಾಕಿ ರೂ.500 ಕೊಡದ ಕಾರಣ, ಮರಣೋತ್ತರ ಪರೀಕ್ಷೆ ಮಾಡೋದಕ್ಕೆ ನಿರಾಕರಿಸಲಾಗಿದೆ. ಅಲ್ಲದೇ ಶವಾಗಾರದ ಬಾಗಿಲು ಹಾಕಿಕೊಂಡು ಹೋಗಿದ್ದಾರೆ.
ಸಿಂಧನೂರು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಮಂಜುನಾಥ್ ಅವರ ಲಂಚಗುಳಿ ತನಕ್ಕೆ ಬೇಸತ್ತಂತ ಮೃತರ ಕುಟುಂಬಸ್ಥರು ಸೇರಿದಂತೆ ಕರ್ನಾಟಕ ಪ್ರಾಂತ ಕೂಲಿ ಕಾರ್ಮಿಕರ ಸಂಘದಿಂದ ಶವಾಗಾರದ ಮುಂದೆ ಪ್ರತಿಭಟನೆ ನಡೆಸಲಾಗಿದೆ.
ಕೂಲಿ ಕಾರ್ಮಿಕರ ಸಂಘದಿಂದ ಪ್ರತಿಭಟನೆ ನಡೆಸುತ್ತಿದ್ದಂತೇ, ಹೆದರಿದಂತ ಸಿಬ್ಬಂದಿ ಮಂಜುನಾಥ್ ತಾನು ಲಂಚ ಪಡೆದಿದ್ದಂತ 1500 ರೂ ವಾಪಾಸು ನೀಡಿ, ಪರಾರಿಯಾಗಿರೋದಾಗಿ ತಿಳಿದು ಬಂದಿದೆ.
ಬೆಂಗಳೂರಲ್ಲಿ ಬ್ರೇಕ್ ಬದಲು ಎಕ್ಸಿಲೇಟರ್ ತುಳಿದ ಆಂಬುಲೆನ್ಸ್ ಚಾಲಕ: ಸರಣಿ ಅಪಘಾತಕ್ಕೆ ಕಾರುಗಳು ಜಖಂ
ಕೋಲಾರದಲ್ಲಿ EVM ಸಾಗಿಸುತ್ತಿದ್ದ ವಾಹನದ ಟೈರ್ ಸ್ಪೋಟ: ರಸ್ತೆಯಲ್ಲೇ ರಿಪೇರಿ, ಬಿಗಿ ಭದ್ರತೆ