ರಾಯಚೂರು : ಶಾಸಕೀಯ ಪುತ್ರ ಪಿಎ ವಿರುದ್ಧ ಕಾನ್ಸ್ಟೇಬಲ್ ಮೇಲೆ ಹಲ್ಲೆ ಆರೋಪ ಕೇಳಿಬಂದಿದ್ದು, ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ದೇವದುರ್ಗ ಠಾಣೆಯ ಕಾನ್ಸ್ಟೇಬಲ್ ಹನುಮಂತ ರಾಯ ಮೇಲೆ ಶಾಸಕೀಯ ಪುತ್ರ ಹಾಗೂ ಪಿಎ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ದೇವದುರ್ಗದ ಜೆಡಿಎಸ್ ಶಾಸಕೀ ಕರೆಮ್ಮ ನಾಯಕ ಪುತ್ರ ಸಂತೋಷ್ ಹಾಗೂ ಪಿಎ ಇಲಿಯಾಸ್ ಸೇರಿ 8 ಜನರ ವಿರುದ್ಧ ಹಲ್ಲೆ ಆರೋಪ ಕೇಳಿ ಬಂದಿದೆ. ನಿನ್ನೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಗೆ ತಡೆ ಹಿಡಿದ ವಿಚಾರಕ್ಕೆ ಶಾಸಕ ಪುತ್ರನಿಂದ ಕರೆ ಬಂದಿದೆ. ಹನುಮಂತರಾಯಗೆ ಫೋನ್ ಕರೆ ಮಾಡಿ ಟ್ರಾಕ್ಟರ್ ಬಿಡುವಂತೆ ಹೇಳಲಾಗಿದೆ.
ಆದರೆ ಹನುಮಂತರಾಯ ಯಾವುದೇ ಒತ್ತಡಕ್ಕೆ ಮಣಿಯದೆ ಟ್ರಾಕ್ಟರ್ ಠಾಣೆಗೆ ತಂದು ಪರಿಶೀಲನೆ ನಡೆಸಿದ್ದಾರೆ.ಇದೇ ವಿಚಾರಕ್ಕೆ ಕಾನ್ಸ್ಟೇಬಲ್ ಕರೆಸಿಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ.ಪ್ರವಾಸಿ ಮಂದಿರಕ್ಕೆ ಕಾನ್ಸ್ಟೇಬಲ್ ಹನುಮಂತ ರಾಯನನ್ನು ಕರೆಸಿಕೊಂಡು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ಶಾಸಕೀಯ ಕರೆಮ್ಮ ನಾಯಕ್ ಪುತ್ರ ಸಂತೋಷ ಹಾಗೂ ಪಿ ಎ ಇಲಿಯಾಸ್ ಸೇರಿ ಎಂಟು ಜನ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಹನುಮಂತ ರಾಯ ಆರೋಪಿಸಿದ್ದಾರೆ.ಘಟನೆಯ ಬಳಿಕ ರಾಜಕೀಯ ಪ್ರಭಾವದಿಂದ ಪ್ರಕರಣ ಮುಖ್ಯ ಹಾಕಲು ಯತ್ನಿಸಲಾಗುತ್ತಿದೆ. ಸದ್ಯ ಹಲ್ಲೆಗೆ ಒಳಗಾದ ಹನುಮಂತರಾಯಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದೇವದುರ್ಗ ಪೊಲೀಸ್ರಣ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.