ರಾಯಚೂರು : ಇತ್ತೀಚಿಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಕ್ಕಳು ವಯಸ್ಕರು ಎನ್ನದೆ ಎಲ್ಲರ ಮೇಲು ನಾಯಿಗಳು ದಾಳಿ ಮಾಡುತ್ತಿವೆ. ಇದೀಗ ರಾಯಚೂರಿನಲ್ಲಿ ಬೀದಿ ನಾಯಿಗಳು ದಾಳಿ ಮಾಡಿದಾಗ ಅವುಗಳಿಂದ ತಪ್ಪಿಸಿಕೊಳ್ಳಲು ಹೋಗಿ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿ ಯುವತಿ ಒಬ್ಬಳು ಕೋಮಾ ಸ್ಥಿತಿಗೆ ತಲುಪಿರುವ ಘಟನೆ ನಡೆದಿತ್ತು. ಇದೀಗ ಚಿಕಿತ್ಸೆಫಲ್ಲಿಸದೆ ಯುವತಿ ಸಾವನಪ್ಪಿದ್ದಾಳೆ.
ಹೌದು ರಾಯಚೂರಿನ ಬಡ್ಡಿಪೇಟೆಯಲ್ಲಿ ಈ ಒಂದು ಘಟನೆ ನಡೆದಿತ್ತು. ಕೋಮಾ ಸ್ಥಿತಿ ತಲುಪಿದ್ದ ಯುವತಿಯನ್ನು ಮಹಾದೇವಿ (20) ಎಂದು ತಿಳಿದುಬಂದಿದೆ. ಡಿಸೆಂಬರ್ 4 ರಂದು ಈ ಘಟನೆ ನಡೆದಿತ್ತು.ದೇವಾಲಯಕ್ಕೆ ಹೋಗುವ ವೇಳೆ ನಾಯಿಗಳು ದಾಳಿ ಮಾಡಿವೆ. ನಾಯಿಯಿಂದ ತಪ್ಪಿಸಿಕೊಳ್ಳಲು ಹೋಗಿ ಕೆಳಗೆ ಬಿದ್ದ ಪರಿಣಾಮ ತಲೆಗೆ ಬಲವಾದ ಪೆಟ್ಟಾಗಿದೆ. ಕೆಳಗೆ ಬಿದ್ದ ಯುವತಿಯನ್ನು ನಾಯಿಗಳು ಎಳೆದಾಡಿವೆ. ಯುವತಿಯನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಳು.
ಯುವತಿಯ ತಲೆಗೆ ಬಲವಾಗಿ ಪೆಟ್ಟು ಬಿದ್ದಿರುವುದರಿಂದ ರಕ್ತ ಹೆಪ್ಪುಗಟ್ಟಿದ್ದು, ಪ್ರಜ್ಞೆ ಕಳೆದುಕೊಂಡಿರುವ ಯುವತಿ ಕೋಮಾ ಸ್ಥಿತಿ ತಲುಪಿದ್ದರು. ರಿಮ್ಸ್ ಆಸ್ಪತ್ರೆಯಲ್ಲಿ ಯುವತಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಗದೇ ಯುವತಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.