ಮಂಡ್ಯ : ಬಿಜೆಪಿಯವರು ಎರಡು ಇಂಡಿಯಾ ನಿರ್ಮಾಣ ಮಾಡುತ್ತಿದ್ದಾರೆ, ಒಂದು ಶ್ರೀಮಂತರ ಇಂಡಿಯಾ ಮತ್ತೊಂದು ಇನ್ನೊಂದು ಕೋಟ್ಯಂತರ ಬಡವರ ಬಡ ಇಂಡಿಯಾ ಎಂದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ಧಾಳಿ ನಡೆಸಿದ್ದಾರೆ.
ನಾಗಮಂಗಲ ತಾಲೂಕಿನ ಬೆಳ್ಳೂರು ನಿಲ್ದಾಣ ಬೆಳ್ಳೂರು ಬಸ್ ನಿಲ್ದಾಣದಲ್ಲಿ ಭಾರತ್ ಜೋಡೋ ಸಮಾವೇಶದಲ್ಲಿ (Bharat Jodo Yatra) ಮಾತನಾಡಿದ ರಾಹುಲ್ ಗಾಂಧಿ ಬಿಜೆಪಿಯವರು ಎರಡು ಇಂಡಿಯಾ ನಿರ್ಮಾಣ ಮಾಡುತ್ತಿದ್ದಾರೆ, ನಾವು ಎರಡು ಇಂಡಿಯಾ ಒಪ್ಪಿಕೊಳ್ಳುವುದಿಲ್ಲ, ಜನರ ಜೇಬಿನಿಂದ ಹಣ ವಿಶ್ವದ 2ನೇ ಶ್ರೀಮಂತ ವ್ಯಕ್ತಿಗೆ ಹೋಗುತ್ತಿದೆ ಎಂದು ವಾಗ್ಧಾಳಿ ನಡೆಸಿದರು.
ನಿಮ್ಮ ಮಕ್ಕಳನ್ನು ನೀವು ಒಳ್ಳೇ ಶಾಲಾ, ಕಾಲೇಜಿಗೆ ಕಳಿಸಲೂ ಕಷ್ಟ ಪಡಬೇಕು. ಪದವಿ ಸರ್ಟಿಫಿಕೆಟ್ ಯಾವುದೇ ಕೆಲಸಕ್ಕೆ ಬರಲ್ಲ. ಅವರಿಗೆ ಕರ್ನಾಟಕದಲ್ಲಿ ಅಥವಾ ಭಾರತದಲ್ಲಿ ಉದ್ಯೋಗ ಸಿಗುವುದಿಲ್ಲ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಬಿಜೆಪಿ ಸರ್ವನಾಶ ಮಾಡಿದೆ ಎಂದು ವಾಗ್ಧಾಳಿ ನಡೆಸಿದರು.
ನಂತರ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿ ಕಾಲಭೈರವೇಶ್ವರನ ದರ್ಶನ ಪಡೆದರು. ಬಳಿಕ ರಾಹುಲ್ ಗಾಂಧಿ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿಯಾದರು.
BREAKING NEWS : ಶಿರಗುಪ್ಪ ಸಕ್ಕರೆ ಕಾರ್ಖಾನೆಯಲ್ಲಿ ಕ್ರೇನ್ ಮುರಿದು ಬಿದ್ದು ಕಾರ್ಮಿಕನ ದುರ್ಮರಣ