ನವದೆಹಲಿ: ಭಾರತದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ʻಹರ್ ಘರ್ ತಿರಂಗʼ ಆಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರೊಫೈಲ್ ಡಿಪಿಯಾಗಿ ʻತ್ರಿವರ್ಣʼವನ್ನು ಹಾಕಿ, ನಾಗರಿಕರಿಗೂ ಅದೇ ರೀತಿ ಮಾಡುವಂತೆ ಹೇಳಿದ ಒಂದು ದಿನದ ನಂತ್ರ ರಾಹುಲ್ ಗಾಂಧಿಯವರು ಕೂಡ
ತಮ್ಮ ಟ್ವಿಟರ್ ಪ್ರೊಫೈಲ್ ಫೋಟೋವನ್ನು ಬದಲಾಯಿಸಿದ್ದಾರೆ.
ರಾಹುಲ್ ಅವರ ಹೊಸ ಟ್ವಿಟ್ಟರ್ ಪ್ರೊಫೈಲ್ ಫೋಟೋವು ʻಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ರಾಷ್ಟ್ರಧ್ವಜವನ್ನು ಹಿಡಿದಿರುವ ಗ್ರೇಡಿಯಂಟ್ ಚಿತ್ರʼವನ್ನು ತೋರಿಸುತ್ತದೆ. ಮಾಜಿ ಪ್ರಧಾನಿ ಕಪ್ಪು ಬಿಳುಪಿನಲ್ಲಿದ್ದು, ರಾಷ್ಟ್ರಧ್ವಜ ಬಣ್ಣದಲ್ಲಿದೆ.
देश की शान है, हमारा तिरंगा
हर हिंदुस्तानी के दिल में है, हमारा तिरंगा pic.twitter.com/lhm0MWd3kM— Rahul Gandhi (@RahulGandhi) August 3, 2022
“ತ್ರಿವರ್ಣ ಧ್ವಜವು ದೇಶದ ಹೆಮ್ಮೆ. ಅದು ಪ್ರತಿಯೊಬ್ಬ ನಾಗರಿಕನ ಹೃದಯದಲ್ಲಿದೆ” ಎಂದು ರಾಹುಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
“ಹರ್ ಘರ್ ತಿರಂಗ” ಆಚರಣೆಯ ಭಾಗವಾಗಿ, ಆಗಸ್ಟ್ 2 ಮತ್ತು 15 ರ ನಡುವೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ರಾಷ್ಟ್ರಧ್ವಜವನ್ನು ತಮ್ಮ ಪ್ರೊಫೈಲ್ ಫೋಟೋವಾಗಿ ಬಳಸಲು ಕೇಂದ್ರವು ನಾಗರಿಕರಿಗೆ ಮನವಿ ಮಾಡಿದೆ.