ರಾಯಚೂರು: ಕಾಂಗ್ರೆಸ್ನ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿದ್ದ ಭಾರತ್ ಜೋಡೋ ಯಾತ್ರೆ ಇಂದು ರಾಯಚೂರು ಮೂಲಕ ತೆಲಂಗಾಣಕ್ಕೆ ತಲುಪಿದೆ.
‘ಕುಕ್ಕೆ ಸುಬ್ರಹ್ಮಣ್ಯ’ಕ್ಕೆ ತೆರಳುವ ಭಕ್ತರ ಗಮನಕ್ಕೆ: ಅ.25ರಂದು ಯಾವುದೇ ಸೇವೆಯಿಲ್ಲ, ದೇವರ ದರ್ಶನಕ್ಕೆ ಮಾತ್ರ ಅವಕಾಶ
ಈ ಮೂಲಕ ರಾಜ್ಯದಲ್ಲಿನ ಯಾತ್ರೆ ಮುಕ್ತಾಯವಾಗಿದೆ.ರಾಯಚೂರಿನಲ್ಲಿ 3ನೇ ದಿನದ ಯಾತ್ರೆ ಯರಮರಸ್ ನಿಂದ ಬೆಳಗ್ಗೆ 6 ಗಂಟೆಗೆ ಆರಂಭವಾಗಿ ಶಕ್ತಿನಗರ ಮಾರ್ಗವಾಗಿ ಕೃಷ್ಣಾ ನದಿ ಸೇತುವೆ ಮೂಲಕ ತೆಲಂಗಾಣಕ್ಕೆ ಪ್ರವೇಶಿಸಿತು. ಪಾದಯಾತ್ರೆ ವೇಳೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿ ರಾಜ್ಯದ ಹಲವಾರು ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು. ರಾಜ್ಯದಲ್ಲಿ ಸುಮಾರು 500 ಕಿ.ಮೀ ಪಾದಯಾತ್ರೆ ನಡೆದಿದೆ.ರಾಯಚೂರು ಗಡಿ ಮೂಲಕ ಈಗ ತೆಲಂಗಾಣ ರಾಜ್ಯದ ಮೆಹಬೂಬ್ ನಗರ ಜಿಲ್ಲೆಯ ಮಕ್ತಲ್ಗೆ ಪಾದಯಾತ್ರೆ ತೆರಳಿದೆ. ತೆಲಂಗಾಣದ ಕಾಂಗ್ರೆಸ್ ಮುಖಂಡರು ಅದ್ಧೂರಿಯಾಗಿ ಜೋಡೋ ಯಾತ್ರೆಯನ್ನು ಸ್ವಾಗತಿಸಿದ್ದಾರೆ.