ವಿಜಯಪುರ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇದೀಗ ಬಿಜೆಪಿಯ ಮಾಜಿ ಸಚಿವ ಸಿಟಿ ರವಿ ಇದೀಗ ವಿಜಯಪುರದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದು, ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಮುಂದಿನ ದಿನಗಳಲ್ಲಿ ಪಾಕಿಸ್ತಾನದಲ್ಲೂ ರಾಹುಲ್ ಗಾಂಧಿ ರಾಜಕೀಯ ಮಾಡಬಹುದು ಎಂದು ಕಿಡಿ ಕಾರಿದರು.
ಕಾಂಗ್ರೆಸ್ ಗೆಲವು ಸಂಭ್ರಮಿಸುವವರು ಪಾಕಿಸ್ತಾನದಲ್ಲಿ ಅಷ್ಟೇ ಇದ್ದಾರೆ. ವಿಜಯಪುರದಲ್ಲಿ ಬಿಜೆಪಿ ಮಾಜಿ ಶಾಸಕ ಸಿಟಿ ರವಿ ಹೇಳಿಕೆ ನೀಡಿದ್ದು ಮುಸ್ಲಿಮರು ಹೆಚ್ಚಿರುವ ಕಾರಣ ರಾಹುಲ್ ಗಾಂಧಿ ಕೇರಳಕ್ಕೆ ಹೋಗಿದ್ದಾರೆ ಮುಂದಿನ ದಿನಗಳಲ್ಲಿ ಪಾಕಿಸ್ತಾನದಲ್ಲೂ ಕೂಡ ರಾಜಕೀಯ ಮಾಡಬಹುದು ರಾಹುಲ್ ಗಾಂಧಿ ಪಾಕಿಸ್ತಾನದಲ್ಲೂ ರಾಜಕೀಯ ಮಾಡಬಹುದು ಎಂದು ವಿಜಯಪುರದಲ್ಲಿ ಬಿಜೆಪಿ ಮಾಜಿ ಶಾಸಕ ಸಿಡಿ ರವಿ ಹೇಳಿಕೆ ನೀಡಿದರು.
ಗ್ಯಾರಂಟಿ ಹೆಸರಿಗೆ ಕೈ ಪೇಟೆಂಟ್ ಪಡೆದಿದ್ದೀಯ? ಗ್ಯಾರಂಟಿ ಅನ್ನೋದು ಕಾಂಗ್ರೆಸ್ ಹುಟ್ಟು ಹಾಕಿದ ಪದವಾಗಿದ್ಯಾ? ಬಿಜೆಪಿ ಗ್ಯಾರಂಟಿ ಅಭಿವೃದ್ಧಿಯತ್ತ ಕೊಂಡುಯುತ್ತದೆ. ನಮ್ಮ ಗ್ಯಾರಂಟಿ ಅಭಿವೃದ್ಧಿ ಗ್ಯಾರಂಟಿಯಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.