]ತುಮಕೂರು: ತಮ್ಮನ್ನು ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ರಾಹುಲ್ ಗಾಂಧಿಯವರು ಆಹ್ವಾನ ಕೊಟ್ಟಿಲ್ಲ ಎಂದು ಜೆಡಿಎಸ್ ನ ಉಚ್ಛಾಟಿತ ಶಾಸಕ, ಗುಬ್ಬಿ ವಿಧಾನಸಭಾ ಕ್ಷೇತ್ರದ ಜನಪ್ರತಿನಿಧಿ ಎಸ್.ಆರ್. ಶ್ರೀನಿವಾಸ್ ಸ್ಪಷ್ಟಪಡಿಸಿದ್ದಾರೆ.
BREAKING NEWS : ಕೇಂದ್ರ ಸರ್ಕಾರದಿಂದ ರೈಲ್ವೇ ಉದ್ಯೋಗಿಗಳಿಗೆ ‘ದೀಪಾವಳಿ ಗಿಫ್ಟ್’ : 11.2 ಕೋಟಿ ರೂ.ಬೋನಸ್ ಘೋಷಣೆ
ತುಮಕೂರಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಶಾಸಕ ಶ್ರೀನಿವಾಸ್, ಭಾರತ್ ಜೋಡೋ ಯಾತ್ರೆಯ ವೇಳೆ ತಮ್ಮನ್ನು ಮಾತುಕತೆಗೆ ಆಹ್ವಾನಿಸಿದ ರಾಹುಲ್ ಗಾಂಧಿ, ‘’ಭಾರತ್ ಜೋಡೋ ಪಾದಯಾತ್ರೆ ಪಕ್ಷಾತೀತ ಕಾರ್ಯಕ್ರಮ. ಅಲ್ಲದೆ, ರಾಷ್ಟ್ರೀಯ ನಾಯಕರಾದರಾಹುಲ್ ಗಾಂಧಿ ತುಮಕೂರು ಜಿಲ್ಲೆಗೆ ಬಂದಿದ್ರು.
BREAKING NEWS : ಕೇಂದ್ರ ಸರ್ಕಾರದಿಂದ ರೈಲ್ವೇ ಉದ್ಯೋಗಿಗಳಿಗೆ ‘ದೀಪಾವಳಿ ಗಿಫ್ಟ್’ : 11.2 ಕೋಟಿ ರೂ.ಬೋನಸ್ ಘೋಷಣೆ
ಅವರ ಜೊತೆ ಕೆಲ ಹೊತ್ತು ಪಾದಯಾತ್ರೆಯಲ್ಲಿ ನಾನೂ ಹೆಜ್ಜೆ ಹಾಕಿದೆ. ಈ ಸಂದರ್ಭದಲ್ಲಿ ದೇಶದಲ್ಲಿ ಮನಸ್ಸು-ಮನಸ್ಸುಗಳ ನಡುವೆ ಬಿರುಕು ಶುರುವಾಗಿದೆ. ಇದನ್ನ ಬೆಸೆಯುವ ಸಲಹೆ ನನ್ನನ್ನು ಕೇಳಿದ್ರು. ರಾಷ್ಟ್ರೀಯ ಐಕ್ಯತೆ ಬಗ್ಗೆ ಕೇಳಿದ್ರು. ನನಗನಿಸಿದ ಸಲಹೆಗಳನ್ನು ಹೇಳಿದ್ದೇನೆ ಎಂದರು.
ಅಲ್ಲದೇ, ರಾಜಕಾರಣಕ್ಕೆ ಹೇಗೆ ಬಂದ್ರಿ. ಜಿಲ್ಲೆಯಲ್ಲಿನ ಸಮಸ್ಯೆ ಹಾಗೂ ನಾನು ಇದ್ದಂತಹ ಪಕ್ಷದಲ್ಲಿ ಆಗಿರುವ ಸಮಸ್ಯೆ ಬಗ್ಗೆ ಕೇಳಿದ್ರು. ಎಲ್ಲವನ್ನೂ ವೇಳೆ ವಿವರಿಸಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಬಗ್ಗೆ ಏನೂ ಮಾತನಾಡಲಿಲ್ಲ. ಪಕ್ಷಕ್ಕೆ ಬರುವಂತೆ ರಾಹುಲ್ ಗಾಂಧಿ ಕೂಡ ಆಹ್ವಾನ ಕೊಟ್ಟಿಲ್ಲ. ಅವರೊಂದಿಗೆ ಲೋಕಾಭಿರಾಮವಾಗಿ ಚರ್ಚೆ ಆಯ್ತು ಎಂದು ಅವರು ಹೇಳಿದ್ದಾರೆ.
BREAKING NEWS : ಕೇಂದ್ರ ಸರ್ಕಾರದಿಂದ ರೈಲ್ವೇ ಉದ್ಯೋಗಿಗಳಿಗೆ ‘ದೀಪಾವಳಿ ಗಿಫ್ಟ್’ : 11.2 ಕೋಟಿ ರೂ.ಬೋನಸ್ ಘೋಷಣೆ