ಬೆಂಗಳೂರು : ಮನಸ್ಸು ಮಾಡಿದ್ರೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ದೇಶದ ಪ್ರಧಾನಿಯಾಗುತ್ತಿದ್ದರು. ಆದ್ರೆ, ಅವ್ರು ತ್ಯಾಗ ಮಾಡಿದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, “ರಮೇಶ್ ಕುಮಾರ್ ಅವ್ರ ಹೇಳಿಕೆಯನ್ನ ತಪ್ಪಾಗಿ ಅರ್ಥೈಸಲಾಗಿದೆ. ಗಾಂಧಿ ಕುಟುಂಬದ ಕೊಡುಗೆಯ ಬಗ್ಗೆ ಅವ್ರು ಸ್ಪಷ್ಟಪಡಿಸಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಪ್ರಧಾನಿಯಾಗುತ್ತಿದ್ದರು. ಆದ್ರೆ, ಅವರು ತ್ಯಾಗ ಮಾಡಿದರು ಮತ್ತು ರಮೇಶ್ ಹೇಳಿದ್ದು ಇದನ್ನೇ” ಎಂದರು.
ಅಂದ್ಹಾಗೆ, ಕಾಂಗ್ರೆಸ್ ಮುಖಂಡ ಕೆ.ಆರ್.ರಮೇಶ್ ಕುಮಾರ್, “ಪಂಡಿತ್ ನೆಹರು, ಇಂದಿರಾ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಹೆಸರಿನಲ್ಲಿ ನಾವು 3-4 ತಲೆಮಾರುಗಳಿಗೆ ಸಾಕಾಗುವಷ್ಟು ಸಂಪಾದಿಸಿದ್ದೇವೆ. ಈಗ ಅವರ ಋಣ ತಿರಿಸುವ ಸಮಯ ಬಂದಿದೆ. ಆ ಋಣ ತೀರಿಸಲು ನಾವು ಸಿದ್ಧರಿಲ್ಲದಿದ್ದರೆ, ನಾವು ತಿನ್ನುವ ಆಹಾರವು ಹುಳುವಾಗುತ್ತೆ” ಎಂದಿದ್ದರು.
The statement of Ramesh Kumar has been misunderstood & misinterpreted. He has made it very clear about the contribution of Gandhi's family…Sonia Gandhi, Rahul Gandhi would have become PM but they sacrificed & this is what Ramesh has said: Karnataka Congress chief DK Shivakumar pic.twitter.com/otjZHTD8Af
— ANI (@ANI) July 22, 2022