ಬೆಂಗಳೂರು : ಕನ್ನಡ ಮಾಧ್ಯಮ ಲೋಕದ ಫೈರ್ ಬ್ರಾಂಡ್, ಬೆಂಕಿ ಚೆಂಡು, ನೇರ ನುಡಿ, ಖಡಕ್ ಮಾತಿಗೆ ಹೆಸರಾದವರು ಹಿರಿಯ ಪತ್ರಕರ್ತೆ, ನಿರೂಪಕಿ ರಾಧ ಹಿರೇಗೌಡರ್. ಟಿಆರ್‌ಪಿ ಮಾಸ್ಟರ್, ಕಂಟೆAಟ್ ಕಿಂಗ್, ಟೀಮ್ ಕಟ್ಟೋದ್ರಲ್ಲಿ ಅವರಿಗೆ ಅವರೇ ಸಾಟಿ.. ಅವರೇ ಶಿವಸ್ವಾಮಿ ಟಿ.ಎಂ. ಸಣ್ಣ ವಯಸ್ಸಿನಲ್ಲೇ ಟಿವಿ೫ ಚಾನಲ್ ಕಟ್ಟಿ ಬೆಳೆಸಿದ ಟೀಮ್ ಲೀಡರ್, ತೆರೆ ಹಿಂದಿನ ಸೂತ್ರಧಾರ, ತೆರೆ ಮೇಲೂ ಅಬ್ಬರಿಸೋ ಚತುರ.. ಸತೀಶ್ ಆಂಜಿನಪ್ಪ..
ಈ ಮೂವರು ಈಗ ಮತ್ತೆ ಒಟ್ಟಾಗಿ ಸೇರಿ ಚಾನಲ್ ಶುರು ಮಾಡ್ತಿದ್ದಾರೆ ಅನ್ನೋ ಚರ್ಚೆ ಸದ್ಯ ಕನ್ನಡ ಮಾಧ್ಯಮ ರಂಗದಲ್ಲಿ ಜೋರಾಗ್ತಿದೆ. ರಾಧ ಹಿರೇಗೌಡರ್, ಶಿವಸ್ವಾಮಿ, ಸತೀಶ್ ಆಂಜಿನಪ್ಪ.. ಮೂವರು ಈ ಹಿಂದೆ ಸುವರ್ಣ ನ್ಯೂಸ್, ಪಬ್ಲಿಕ್ ಟಿವಿಯಲ್ಲಿ ಆರಂಭದಿAದಲೂ ಜೊತೆಯಾಗಿಯೇ ಕೆಲಸ ಮಾಡಿದ್ದಾರೆ. ಅದರಲ್ಲೂ ಪಬ್ಲಿಕ್ ಟಿವಿ ಕಟ್ಟಿ ಬೆಳೆಸಿದ ಟೀಮ್ ಇವರದ್ದು ಅನ್ನೋ ಮಾತಿದೆ. ವಿವಿಧ ಕ್ಷೇತ್ರಗಳಲ್ಲಿ ಪಂಟರ್ ಗಳು ಅನ್ನೋ ಖ್ಯಾತಿ ಇವರಿಗೆ ಇದೆ. ಹೀಗಾಗಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಎಲೆಕ್ಷನ್ ಟೈಮಲ್ಲಿ ರಾಧ ಹಿರೇಗೌಡರ್ ಎಲ್ಲೂ ಕಾಣ್ತಿಲ್ಲ ಅಂತ ನಮ್ಮ ತಂಡ ವಿಚಾರಿಸಿದಾಗ ಈ ಸುದ್ದಿ ಸಿಕ್ಕಿದೆ.
ರಾಧಾ ಹಿರೇಗೌಡರ್
ಉದಯ, ಸುವರ್ಣ ನ್ಯೂಸ್, ಪಬ್ಲಿಕ್ ಟಿವಿ ಹಾಗೂ ಬಿಟಿವಿಯಲ್ಲಿ ತನ್ನದೇ ಆದ ಚಾಪು ಮಾಡಿಸಿದ್ದ ರಾಧ ಹಿರೇಗೌಡರ್ ಕಳೆದ ಕೆಲವು ದಿನಗಳಲ್ಲಿ ಟಿವಿ ಸ್ಕಿçÃನ್ ಮೇಲೆ ಕಾಣಿಸ್ತಿಲ್ಲ. ಎಲ್ಲೋದ್ರಪ್ಪ ರಾಧ ಹಿರೇಗೌಡರ್ ಅಂತ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗಿದ್ದೇ ಆಗಿದ್ದು. ಯಾವಾಗ ಕಿರಿಕ್ ಕೀರ್ತಿ ತಮ್ಮ ಫೇಸ್ ಬುಕ್ ಪೇಜಲ್ಲಿ ಫೋಟೋ ಶೇರ್ ಮಾಡಿದ್ರೋ ಅಲ್ಲಿಂದ ಹೊಸ ಚರ್ಚೆ ಶುರುವಾಯ್ತು. ರಾಧ ಹಿರೇಗೌಡರ್ ಹೊಸ ನ್ಯೂಸ್ ಚಾನೆಲ್ ಮಾಡ್ತಿದ್ದಾರೆ ಅನ್ನೋ ಗುಸು ಗುಸು ಶುರುವಾಯ್ತು. ಹಾಗಿದ್ರೆ ರಾಧ ಹಿರೇಗೌಡರ್ ಅವರ ಚಾನೆಲ್ ಹೆಸರು ಏನು.? ಯಾವಾಗ ಲಾಂಚ್ ಈ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ.
ಶಿವಸ್ವಾಮಿ ಟಿ.ಎಂ.
ಈಟಿವಿಯಲ್ಲಿ ಪಳಗಿದ ಕಂಟೆAಟ್ ಮಾಸ್ಟರ್.. ಸುವರ್ಣ ನ್ಯೂಸ್ ಗೆ ಬಂದು, ಪಬ್ಲಿಕ್ ಟಿವಿ ಕಟ್ಟುವ ಹೊತ್ತಿಗೆ ಕಂಟೆAಟ್ ಜೊತೆ ಟಿಆರ್ ಪಿ ಕಿಂಗ್ ಆಗಿದ್ದವರು ಶಿವಸ್ವಾಮಿ. ಪಬ್ಲಿಕ್ ನಿಂದ ಬಿಟಿವಿಯಲ್ಲೂ ೫-೬ ವರ್ಷ ಮುಗಿಸಿದ್ದಾಯ್ತು. ಸ್ವಂತ ಚಾನಲ್ ಮಾಡಬೇಕು ಅನ್ನೋದು ಬಹು ವರ್ಷಗಳ ಕನಸು. ಆ ಕನಸು ಈಡೇರುವ ಸಮಯ ಬಂದಿದೆ. ಶಿವಸ್ವಾಮಿ ಚಾನಲ್ ಮಾಡಿದ್ರೆ ಗ್ಯಾರಂಟಿ ಸಕ್ಸಸ್ ಆಗುತ್ತೆ ಅನ್ನೋ ಮಾತು ಈಗಾಗ್ಲೇ ಮಾಧ್ಯಮ ವಲಯದಲ್ಲಿ ಕೇಳಿ ಬರುತ್ತಿದೆ.
ಸತೀಶ್ ಆಂಜಿನಪ್ಪ
ಒAದ್ ರೀತಿ ಶಿವಸ್ವಾಮಿ ಶಿಷ್ಯ ಅಂತಲೇ ಕರೆಸಿಕೊಳ್ತಾರೆ. ಶಿವಸ್ವಾಮಿಯಂತೆ ಕಂಟೆAಟ್ ನಲ್ಲೂ, ಟಿಆರ್ ಪಿಯಲ್ಲೂ, ಟೆಕ್ನಿಕಲ್ ನಲ್ಲೂ ಪರಿಣಿತ. ಸುವರ್ಣದಲ್ಲಿ ಆರಂಭಿಸಿ, ಪಬ್ಲಿಕ್ ಟಿವಿಯಲ್ಲಿ ಹೆಚ್.ಆರ್. ರಂಗನಾಥ್ ಗರಡಿಯಲ್ಲಿ ಪಳಗಿದವರು. ಅಲ್ಲಿಂದ ಈಟಿವಿ ನ್ಯೂಸ್ ಔಟ್ ಪುಟ್ ಹೆಡ್ ಆಗಿ, ಬಳಿಕ ಟಿವಿ೫ ಕನ್ನಡದ ಕಟ್ಟಿದ ತೆರೆ ಹಿಂದಿನ ಸೂತ್ರಧಾರ. ಶಿವು ಬೆಸಗರಹಳ್ಳಿ ಜೊತೆ ಸೇರಿ ಕರ್ನಾಟಕ ಟಿವಿಂ ಡಿಜಿಟಲ್ ಮಾಧ್ಯಮದಲ್ಲಿ ತೆರೆ ಮೇಲೂ ಹೊಸ ಸಂಚಲನ ಸೃಷ್ಟಿಸಿದವರು ಸತೀಶ್ ಆಂಜಿನಪ್ಪ.
ಈಗ ರಾಧ ಹಿರೇಗೌಡರ್, ಶಿವಸ್ವಾಮಿ, ಸತೀಶ್ ಆಂಜಿನಪ್ಪ ಟೀಮ್ ಹೊಸ ಸಾಹಸಕ್ಕೆ ಕೈ ಹಾಕಿದೆ. ಯಾವಾಗ ಲಾಂಚ್, ಚಾನಲ್ ಹೆಸರೇನು..? ಎಲ್ಲವೂ ಶೀಘ್ರದಲ್ಲೇ ಗೊತ್ತಾಗಲಿದೆ.. ಒಟ್ಟಿನಲ್ಲಿ ಒಳ್ಳೇದಾಗಲಿ.
ಬರ ಪರಿಹಾರ ಸಂಬಂಧ ಅಮಿತ್ ಶಾ ಹೇಳಿಕೆ ಸತ್ಯ ಎಂದು ಸಾಬೀತುಪಡಿಸಿದರೆ ರಾಜಿನಾಮೆ ನೀಡುತ್ತೇನೆ : ಸಿಎಂ ಸಿದ್ದರಾಮಯ್ಯ
UPI Update: ಡಿಜಿಟಲ್ ಪಾವತಿಯಲ್ಲಿ ಭಾರತ ಮುಂದು: 2023ರ ದ್ವಿತೀಯಾರ್ಧದಲ್ಲಿ 100 ಲಕ್ಷ ಕೋಟಿ ರೂ ವಹಿವಾಟು