ಶಿವಮೊಗ್ಗ: ಜಿಲ್ಲೆಯ ಪ್ರತಿಷ್ಠಿತ ರಾಜ್ಯ ಸರ್ಕಾರಿ ನೌಕರರ ಸೌಹಾರ್ದ ಸಹಕಾರಿ ಸಂಘ ನಿ. ಶಿವಮೊಗ್ಗ ಈ ಸಹಕಾರಿ ಸಂಘದ 2026-2031ರವರೆಗಿನ ಮುಂದಿನ ಐದು ವರ್ಷಗಳ ಅವಧಿಗೆ ನಡೆದ ಆಡಳಿತ ಮಂಡಳಿಯ ಸಾಮಾನ್ಯ ಚುನಾವಣೆಯಲ್ಲಿ ಸತತ ಮೂರನೇ ಬಾರಿಗೆ ಆರ್. ಮೋಹನ್ ಕುಮಾರ್ ರವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಾಕ್ಷರಿರವರು ಸ್ಥಾಪಿಸಿರುವ ಈ ಸಹಕಾರಿ ಸಂಘವು ಕಳೆದ 10 ವರ್ಷಗಳಿಂದ ಆರ್. ಮೋಹನ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಸರ್ಕಾರಿ ನೌಕರರಿಗೆ ಹಲವು ತರಹದ ಸಾಲ ಹಾಗೂ ಠೇವಣೆ ಸೌಲಭ್ಯಗಳನ್ನು ನೀಡುವುದರ ಮೂಲಕ ಪ್ರಗತಿ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಸಹಕಾರಿ ಸಂಘವು ಪ್ರಸಕ್ತ 80 ಕೋಟಿಗೂ ಅಧಿಕ ವಾರ್ಷಿಕ ವಹಿವಾಟನ್ನು ನಡೆಸುತ್ತಿದ್ದು. 30 ಕೋಟಿಗೂ ಅಧಿಕ ದುಡಿಯುವ ಬಂಡವಾಳವನ್ನು ಹೊಂದಿದೆ. ಕಳೆದ 5 ವರ್ಷವೂ ನಿರಂತರವಾಗಿ 01 ಕೋಟಿಗೂ ಅಧಿಕ ನಿವ್ವಳ ಲಾಭವನ್ನು ಹೊಂದುವ ಮೂಲಕ ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸುವಲ್ಲಿ ಅಧ್ಯಕ್ಷರು ಪ್ರಮುಖ ಪಾತ್ರ ವಹಿಸಿರುತ್ತಾರೆ. ಕಳೆದ 35 ವರ್ಷಗಳಿಂದ ಸಂಘಟನೆಯಲ್ಲಿ ಸೇವೆ ಸಲ್ಲಿಸಿ, ಅಪಾರ ಅನುಭವವನ್ನು ಹೊಂದಿರುವ ಆರ್.ಮೋಹನ್ ಕುಮಾರ್ ರವರು ಕಳೆದ ವರ್ಷ ನಡೆದ ಸರ್ಕಾರಿ ನೌಕರರ ಸಂಘದಲ್ಲಿನ ಚುನಾವಣೆಯಲ್ಲಿಯೂ ಸಹ ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿ ನೌಕರರ ಪರವಾಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ.
ಸತತ ಮೂರನೇ ಬಾರಿಗೆ ರಾಜ್ಯ ಸರ್ಕಾರಿ ನೌಕರರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಆರ್. ಮೋಹನ್ ಕುಮಾರ್ ರವರು ಮುಂದಿನ ಐದು ವರ್ಷಗಳಲ್ಲಿ ಜಿಲ್ಲೆಯ ಸರ್ಕಾರಿ ನೌಕರರಿಗೆ ಅನುಕೂಲವಾಗುವಂತೆ ಕಡಿಮೆ ಬಡ್ಡಿದರದಲ್ಲಿ ಹೆಚ್ಚಿನ ಸಾಲ ಸೌಲಭ್ಯಗಳು ಹಾಗೂ ಉಳಿತಾಯ ಯೋಜನೆಗಳನ್ನು ಜಾರಿಗೆ ತರುವ ಅಪೇಕ್ಷೆಯನ್ನು ಹೊಂದಿದ್ದು, ಸಂಘದ ಸದಸ್ಯರ ಆರ್ಥಿಕ ಬೆಳವಣಿಗೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಲವು ನೂತನ ಯೋಜನೆಗಳನ್ನು ರೂಪಿಸುವ ಇಚ್ಛೆಯನ್ನು ಹೊಂದಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿ ಶ್ರೀ ಆರ್.ಮೋಹನ್ ಕುಮಾರ್ ರವರು ಸೇರಿದಂತೆ ಉಪಾಧ್ಯಕ್ಷರಾಗಿ ಐ.ಬಿ.ಮೋಹನ್ ಕುಮಾರ್, ನಿರ್ದೇಶಕರಾಗಿ ಸಿ.ಎಸ್.ಷಡಾಕ್ಷರಿ, ಎಸ್.ಆರ್.ನರಸಿಂಹಮೂರ್ತಿ, ಡಾ.ಸಿ.ಎ.ಹಿರೇಮಠ, ಎನ್.ಎಂ.ರಂಗನಾಥ, ಡಿ.ವಿ.ಸತೀಶ್, ರಾಜು ಲಿಂಬು ಚವ್ಹಾಣ, ಟಿ.ಕೊಟ್ರೇಶ, ಪಿ.ಎಲ್.ಮಹೇಶ್, ಕೆ.ನರಸಿಂಹ ಜಿ.ಪ್ರವೀಣಕುಮಾರ್, ಎಂ.ಜಯ, ಎಸ್.ಪಿ.ರಾಜು, ಎಸ್.ಶೋಭಿತ್, ರೇಖಾ ಎಸ್ ಹಾಗೂ ಆಶಾ ಕೆ.ಎಂ ಅವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
JOB ALERT: ಏ.1ರಂದು ಶಿವಮೊಗ್ಗದಲ್ಲಿ ‘ವೈದ್ಯಾಧಿಕಾರಿ ಹುದ್ದೆ’ಗಳ ಭರ್ತಿಗೆ ನೇರ ಸಂದರ್ಶನ ಆಯೋಜನೆ
ತರಗತಿಯಲ್ಲಿ ಮುಸ್ಲಿಂ ವಿದ್ಯಾರ್ಥಿಯನ್ನು ಟೆರರಿಸ್ಟ್ ಎಂದು ಕರೆದ ಪ್ರೊಫೆಸರ್ : ವಿಡಿಯೋ ವೈರಲ್ | WATCH VIDEO








