ಬೆಂಗಳೂರು : ರೈತರಿಗಾಗಿ ಕಂದಾಯ ಇಲಾಖೆಯಿಂದ ಹಲವು ಯೋಜನೆ ಜಾರಿ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.
ನಗರದ ಜಿಕೆವಿಕೆ ಮೈದಾನದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಮಾತನಾಡಿದ ಸಚಿವರು ರೈತರಿಗಾಗಿ ಕಂದಾಯ ಇಲಾಖೆಯಿಂದ ಹಲವು ಯೋಜನೆ ಜಾರಿ ಮಾಡಲಾಗಿದೆ, ರೈತರ ಮನೆ ಬಾಗಿಲಿಗೆ ಪಿಂಚಣಿಯನ್ನು 74 ಗಂಟೆಗಳಲ್ಲಿ ತಲುಪಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ರೈತರ ಅಕ್ರಮ ಜಮೀನನ್ನು ಸಕ್ರಮ ಮಾಡುವ ಕೆಲಸ ಮಾಡುತ್ತಿದ್ದೇವೆ. ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಕಾಫಿ ಬೆಳೆಗಾರರಿದ್ದಾರೆ, ಕಾಫಿ ಬೆಳೆಗಾರರಿಗೆ ಸರ್ಕಾರಿ ಜಮೀನು ಲೀಜ್ ಗೆ ಕೊಡುವ ಕೆಲಸ ಮಾಡುತ್ತಿದ್ದೇವೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.
BIGG NEWS : ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ‘ಟಿಪ್ಪು ಜಯಂತಿ’ಗೆ ಅನುಮತಿ ನೀಡುವಂತೆ ಮೇಯರ್ ಗೆ ಮನವಿ