ಬಳ್ಳಾರಿ : ಬಳ್ಳಾರಿಯಲ್ಲಿ ಬ್ಯಾನರ್ ವಿಚಾರಕ್ಕೆ ಗಲಾಟೆ ನಡೆದು ಫೈರಿಂಗ್ ವೇಳೆ ಕಾಂಗ್ರೆಸ್ ಕಾರ್ಯಕರ್ತರ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ವಿಪಕ್ಷ ನಾಯಕ ಆರ್ ಅಶೋಕ ಗಂಭೀರವಾದ ಆರೋಪ ಮಾಡಿದ್ದು, ಶಾಸಕ ಜನಾರ್ಧನ ರೆಡ್ಡಿ ಅವರನ್ನು ಮುಗಿಸಲು ಸಂಚು ಮಾಡಿದ್ದಾರೆ ಎಂದು ಗಂಭೀರವಾದ ಆರೋಪ ಮಾಡಿದ್ದಾರೆ.
ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕ ಜನಾರ್ದನ ರೆಡ್ಡಿ ಅವರನ್ನು ಮುಗಿಸಲು ನಡೆಸಿರುವ ಸಂಚು ಇದಾಗಿದೆ. ಸ್ಥಳಕ್ಕೆ ಮಾಜಿ ಸಚಿವ ಶ್ರೀರಾಮುಲು ಅವರು ಬರದಿದ್ದರೆ ದೊಡ್ಡ ಅನಾಹುತವೇ ಆಗುತ್ತಿತ್ತು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿ ಹೋಗಿದೆ. ಘಟನೆ ನಡೆದ ತಕ್ಷಣ ಗೃಹ ಸಚಿವ ಜಿ ಪರಮೇಶ್ವರ್ ಯಾರ ಮೇಲೆ ಗುಂಡು ಹಾರಿಸಿದರು ಅವರಿಗೆ ಕರೆ ಮಾಡಬೇಕಿತ್ತು. ಏನಾದರೂ ಅಪಾಯ ಆಗಿದೆಯಾ? ಏನಾದರೂ ತೊಂದರೆ ಆಗಿದೆಯಾ? ನಿಮಗೆ ಸೆಕ್ಯೂರಿಟಿ ಬೇಕಾ? ಅಂತ ಕರೆ ಮಾಡಬೇಕಾಗಿತ್ತು ಆದರೆ ಅವರು ಅಪರಾಧಿಗೆ ಕರೆ ಮಾಡಿದ್ದಾರೆ ಎಂದು ಕಿಡಿ ಕಾರಿದರು.








