ಲಂಡನ್: ಬ್ರಿಟನ್ ನಲ್ಲಿ ಅತಿ ಹೆಚ್ಚು ಕಾಲ ಆಳಿದ ರಾಣಿ ಎಲಿಜಬೆತ್ II ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಅವರು ಬಳಲುತ್ತಿದ್ದರು, ಅವರಿಗೆ ಚಿಕಿತ್ಸೆ ನೀಡಲಾಗುತಿತ್ತು, ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಅಂತ ತಿಳಿದು ಬಂದಿದೆ.
ರಾಣಿ ಇಂದು ಮಧ್ಯಾಹ್ನ ಬಾಲ್ಮೋರಲ್ನಲ್ಲಿ ನಿಧನರಾದರು ಅಂತ ಬಕಿಂಗ್ಹ್ಯಾಮ್ ಅರಮನೆ ಮಾಧ್ಯಮ ಪ್ರಕಟಣೆಯನ್ನು ಹೊರಡಿಸಿದೆ. ರಾಣಿಯ ಮಗ ಮತ್ತು ಉತ್ತರಾಧಿಕಾರಿ ಪ್ರಿನ್ಸ್ ಚಾರ್ಲ್ಸ್, ಮೊಮ್ಮಕ್ಕಳಾದ ವಿಲಿಯಂ ಮತ್ತು ಹ್ಯಾರಿ ಮತ್ತು ಅವರ ಕುಟುಂಬಗಳು ಇರುವ ಸ್ಕಾಟಿಷ್ ಪರ್ವತಶ್ರೇಣಿಗಳಲ್ಲಿನ ಅವಳ ಬಾಲ್ಮೊರಲ್ ಮನೆಯಲ್ಲಿ ಅವಳು ತನ್ನ ಕೊನೆಯ ದಿನಗಳನ್ನು ಕಳೆದರು ಎನ್ನಲಾಗಿದೆ. 2015 ರಲ್ಲಿ, ರಾಣಿ ಎಲಿಜಬೆತ್ ತನ್ನ ಮುತ್ತಜ್ಜಿ ರಾಣಿ ವಿಕ್ಟೋರಿಯಾ ಅವರನ್ನು ಹಿಂದಿಕ್ಕಿ ದೀರ್ಘಕಾಲ ಸೇವೆ ಸಲ್ಲಿಸಿದ ಬ್ರಿಟಿಷ್ ರಾಣಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ವರ್ಷ, ಅವರು ವಿಶ್ವದ ಎರಡನೇ ಅತಿ ಹೆಚ್ಚು ಆಳಿದ ರಾಜ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
The Queen died peacefully at Balmoral this afternoon.
The King and The Queen Consort will remain at Balmoral this evening and will return to London tomorrow. pic.twitter.com/VfxpXro22W
— The Royal Family (@RoyalFamily) September 8, 2022
Queen Elizabeth II, the UK’s monarch for the past 70 years, has died aged 96 https://t.co/nuFdc3PV49
— BBC Breaking News (@BBCBreaking) September 8, 2022