ಹಾಸನ: ವ್ಯವಹಾರದ ವಿಷಯದಲ್ಲಿ ತಗಾದೆಯಾಗಿ ಗಂಗೆ ಆಣೆ ಮಾಡಲು ಹೋಗಿ ಇಬ್ಬರು ಕಾಲು ಜಾರಿ ಬಿದ್ದು ನೀರುಪಾಲಾಗಿರುವ ಘಟನೆ ತಾಲೂಕಿನ ತೇಜೂರು ಗ್ರಾಮದಲ್ಲಿ ನಡೆದಿದೆ.
ಚಂದ್ರು ಮತ್ತು ಆನಂದ್ ಮೃತ ದುರ್ದೈವಿಗಳು. ತೇಜರೂ ಕೆರೆಯ ಬಳಿ ಅವಘಡ ಸಂಭವಿಸಿದೆ. ಇವರಿಬ್ಬರ ನಡುವೆ ವ್ಯವಹಾದ ವಿಷಯವಾಗಿ ಜಗಳ ನಡೆದಿದೆ. ಇದು ಅತೀರಕಕ್ಕೆ ಹೋಗಿ ದೇವರ ಮೊರೆ ಹೋಗಿದ್ದಾರೆ. ಆಣೆ ಮಾಡಲು ತೇಜೂರು ಕೆರೆಗೆ ಹೋಗಿದ್ದಾರೆ. ಆಗಾ ಕಾಲು ಜಾರಿ ಬಿದ್ದಿದ್ದಾರೆ ಆದರೆ ಬೆಳಗ್ಗೆಯಾದ್ರೂ ಇವರು ಪತ್ತೆ ಇಲ್ಲ ಕಾರಣ ಹುಡುಕಾಡಿದಾಗ ಕೆರೆಯಲ್ಲಿ ಬಿದ್ದು ಮೃತಪಟ್ಟಿರುವುದು ತಿಳಿದುಬಂದಿದೆ.