ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ನೀರಲಕೇರಿ ಗ್ರಾಮದಲ್ಲಿ ಬಾಮೈದನೀಂದಲೇ ಭಾವ ಯೋಧನನ್ನ ಹತ್ಯೆ ಮಾಡಿರುವ ಘಟನೆ ನಡೆದಿದೆ.
25 ವರ್ಷದ ಕರಿಸಿದ್ದಪ್ಪ ಕಳಸದ ಹತ್ಯೆಯಾದ ಯೋಧ. ಈತ ಭಾರತೀಯ ಸೇನೆ ಯೋಧನಾಗಿ ಕಾರ್ಯನಿರ್ವಹಿಸುತ್ತಿದ್ದ. ಸಿದ್ದನಗೌಡ ದೂಳಪ್ಪ ಎಂಬಾತನಿಂದ ಈ ಕೃತ್ಯ ನಡೆದಿದೆ. ಕರಿಸಿದ್ದಪ್ಪ ರಜೆ ಮೇಲೆ ನಾಲ್ಕು ದಿನಗಳ ಹಿಂದೆಷ್ಟೇ ಮನೆಗೆ ಬಂದಿದ್ದರು.
ಎರಡು ವರ್ಷಗಳ ಹಿಂದೆ ಕರಿಸಿದ್ದಪ್ಪ ಕಳಸದ, ವಿದ್ಯಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ನಿನ್ನೆ ರಾತ್ರಿ ಊಟ ನೀಡುವ ವೇಳೆ ದಂಪತಿ ನಡುವೆ ಜಗಳವಾಗಿದೆ. ಹೀಗಾಗಿ ವಿದ್ಯಾ ತಮ್ಮ ಸಹೋದರನಿಗೆ ಕರೆ ಮಾಡಿ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಸಿದ್ದನಗೌಡ ದೂಳಪ್ಪ ತನ್ನ ಸಹೋದರಿಗೆ ಕಿರುಕುಳ ಕೊಡುತ್ತಿಯಾ ಎಂದು ಚಾಕು ಇರಿದು ಕರಿಸಿದ್ದಪ್ಪ ಕಳಸದರನ್ನು ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಕೆರೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.