ಪಶ್ಚಿಮ ಬಂಗಾಳದ ಚುನಾವಣಾ ಕಣದಲ್ಲಿ ಬ್ಯುಸಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (ಏಪ್ರಿಲ್ 19, 2026) ಹಠಾತ್ ರಸ್ತೆ ಬದಿಯ ಅಂಗಡಿಯೊಂದರಲ್ಲಿ ನಿಂತು ಬಂಗಾಳದ ಖ್ಯಾತ ಬೀದಿ ಆಹಾರ ‘ಝಲ್ಮುರಿ’ ಸವಿಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ಸಂದರ್ಭದಲ್ಲಿ ಅವರು ನೀಡಿದ ಹಾಸ್ಯಭರಿತ ಪ್ರತಿಕ್ರಿಯೆಯ ವಿಡಿಯೋ ಇಂಟರ್ನೆಟ್‌ನಲ್ಲಿ ಹೊಸ ದಾಖಲೆ ಬರೆದಿದೆ.
ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಕೇವಲ 24 ಗಂಟೆಗಳಲ್ಲಿ 10 ಕೋಟಿಗೂ (100M+) ಅಧಿಕ ವೀಕ್ಷಣೆ ಪಡೆದಿದೆ. ಫೇಸ್‌ಬುಕ್‌ನಲ್ಲಿ ಸುಮಾರು 9 ಕೋಟಿ ವೀಕ್ಷಣೆಗಳನ್ನು ದಾಟಿದ್ದು, ಆಪಲ್ ಸಿಇಒ ಅಥವಾ ಯಾವುದೇ ಜಾಗತಿಕ ನಾಯಕರ ವಿಡಿಯೋಗಳಿಗಿಂತ ಹೆಚ್ಚಿನ ವೇಗದಲ್ಲಿ ವೈರಲ್ ಆಗುತ್ತಿದೆ.
ಅಂಗಡಿಯವನು ಝಲ್ಮುರಿಗೆ ಈರುಳ್ಳಿ ಹಾಕಬೇಕೆ ಎಂದು ಕೇಳಿದಾಗ, ಮೋದಿ ನಗುತ್ತಾ, “ಪ್ಯಾಜ್ ಖಾತಾ ಹೂಂ, ಬಸ್ ದಿಮಾಗ್ ನಹೀ ಖಾತಾ” (ನಾನು ಈರುಳ್ಳಿ ತಿನ್ನುತ್ತೇನೆ, ಆದರೆ ಬೇರೆಯವರ ಮೆದುಳನ್ನಲ್ಲ) ಎಂದು ತಮಾಷೆ ಮಾಡಿದರು. ಈ ಮಾತು ಈಗ ಸಾಮಾಜಿಕ ಜಾಲತಾಣಗಳಲ್ಲಿ ‘ಮೀಮ್’ಗಳಾಗಿ ವೈರಲ್ ಆಗುತ್ತಿದೆ.








