ನವದೆಹಲಿ: ಅಣ್ವಸ್ತ್ರಗಳ ಬಳಕೆಯ ಬಗ್ಗೆ ಪರೋಕ್ಷ ಉಲ್ಲೇಖದಲ್ಲಿ, ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶುಕ್ರವಾರ ಉಕ್ರೇನ್ನ ನಾಲ್ಕು ಆಕ್ರಮಿತ ಪ್ರದೇಶಗಳನ್ನ ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿದ್ದಾರೆ. ಇನ್ನು ಹೊಸದಾಗಿ ಸಂಯೋಜಿಸಲಾದ ಪ್ರದೇಶಗಳನ್ನು ರಕ್ಷಿಸಲು ‘ಲಭ್ಯವಿರುವ ಎಲ್ಲಾ ವಿಧಾನಗಳನ್ನು’ ಬಳಸುವುದಾಗಿ ಹೇಳಿದರು ಎಂದು ಸುದ್ದಿ ಸಂಸ್ಥೆ ಎಪಿ ವರದಿ ಮಾಡಿದೆ.
ವರದಿಯ ಪ್ರಕಾರ, ರಷ್ಯಾವು ಉಕ್ರೇನಿನ ನಗರಗಳನ್ನ ಕ್ಷಿಪಣಿಗಳು, ರಾಕೆಟ್ಗಳು ಮತ್ತು ಆತ್ಮಹತ್ಯಾ ಡ್ರೋನ್ಗಳಿಂದ ಹೊಡೆದುರುಳಿಸಿದೆ ಮತ್ತು ಶುಕ್ರವಾರ ಒಂದು ದಾಳಿಯಲ್ಲಿ 25 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
Russian President Vladimir Putin presided over a ceremony to annex four Ukrainian regions partly occupied by his forces, escalating his seven-month war and taking it into an unpredictable new phase: Reuters pic.twitter.com/XSr4ley4NK
— ANI (@ANI) September 30, 2022