ಬೆಂಗಳೂರು : 75ನೇ ಸ್ವಾತಂತ್ರೋತ್ಸವ ಸಂಧರ್ಭದಲ್ಲಿ ಸಾವರ್ಕರ್ ಫೋಟೋ ಫ್ಲೆಕ್ಸ್ ಸಮರ ಇದೀಗ ವಿವಿಧ ಮಜಲುಗಳನ್ನು ಬದಲಾವಣೆಯಾಗುತ್ತಿದ್ದು. ʻಗಣೇಶ ಪಕ್ಕದಲ್ಲಿ ಸಾವರ್ಕರ್ ಫೋಟೋ ಇಡಿʼ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ವಿರುದ್ಧ ಮುತಾಲಿಕ್ ಸವಾಲ್ ಹಾಕಿದ್ದಾರೆ.
ಸಾವರ್ಕರ್ ಅವಮಾನ ಮಾಡಿದ್ರೆ ಇಡೀ ರಾಷ್ಟ್ರಕ್ಕೆ ಅವಮಾನ ಮಾಡಿದಂತೆ. ಸಾರ್ವಜನಿಕ ಗಣೇಶೋತ್ಸವ ಮಂಟಪದಲ್ಲಿ ವೀರ ಸಾವರ್ಕರ್ ಫೋಟೋ ಇಡುತ್ತೇವೆ. ಗಣೇಶ ಪಕ್ಕದಲ್ಲಿ ಸಾವರ್ಕರ್ ಫೋಟೋ ಇಟ್ಟು, ದೇಶ ಭಕ್ತಿಯನ್ನು ಸಾರುತ್ತೇವೆ. ನಿಮಗೆ ತಾಕತ್ ಇದ್ರೆ ತಡೀರಿ ನೋಡೋಣ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರವೋದ್ ಮುತಾಲಿಕ್ ಸವಾಲ್ ಹಾಕಿದ್ದಾರೆ.