ಬಟಿಂಡಾ(ಪಂಜಾಬ್): ಪಂಜಾಬ್ನ ಆಮ್ ಆದ್ಮಿ ಪಕ್ಷದ ಶಾಸಕಿ ಬಲ್ಜಿಂದರ್ ಕೌರ್ ಅವರನ್ನು ಆಡಳಿತ ಪಕ್ಷದ ನಾಯಕರೂ ಆದ ಅವರ ಪತಿ ಕಪಾಳಮೋಕ್ಷ ಮಾಡಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.
ಜುಲೈ 10 ರಂದು ಈ ಘಟನೆ ನಡೆದಿದೆ. ವೈರಲ್ ಆದ ವೀಡಿಯೊದಲ್ಲಿ, ಪಂಜಾಬ್ ತಲ್ವಾಂಡಿ ಸಾಬೋದಿಂದ ಎರಡು ಬಾರಿ ಶಾಸಕರಾಗಿರುವ ಪತಿ ಸುಖರಾಜ್ ಸಿಂಗ್ ಅವರೊಂದಿಗೆ ಕೌರ್ ವಾದ ಮಾಡುವುದನ್ನು ನೋಡಬಹುದು. ಈ ವೇಳೆ ಇದ್ದಕ್ಕಿದ್ದಂತೆ, ಸಿಂಗ್ ಎದ್ದು ಕೌರ್ಗೆ ಕಪಾಳಮೋಕ್ಷ ಮಾಡುತ್ತಾನೆ. ಆಗ ಅಲ್ಲೇ ದಂಪತಿಯ ಬಳಿ ನಿಂತಿದ್ದ ಕೆಲವರು ಮಧ್ಯಪ್ರವೇಶಿಸಿ ಸಿಂಗ್ ಅವರನ್ನು ಸಮಾಧಾನಪಡಿಸುವುದನ್ನು ವಿಡಿಯೋ ತೋರಿಸಿದೆ.
#Punjab :- A viral video of MLA Baljinder Kaur (talwandi Sabo) has been slept by her husband, As per reports, it’s matter of Domestic issue#AAP #WomensRights #slapface pic.twitter.com/6ilZ4DaFBR
— Harpreet Singh Sethi (@Harpreetsethi95) September 1, 2022
ಈ ಬಗ್ಗೆ ಎಎಪಿ ಶಾಸಕಿಯಿಂದ ಯಾವುದೇ ದೂರು ದಾಖಲಾಗಿಲ್ಲ. ಏತನ್ಮಧ್ಯೆ, ಪಂಜಾಬ್ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮನಿಶಾ ಗುಲಾಟಿ ಅವರು ವೀಡಿಯೊವನ್ನು ನೋಡಿದ್ದು, ಘಟನೆಯ ಬಗ್ಗೆ ಸ್ವಯಂಪ್ರೇರಿತವಾಗಿ ನೋಟಿಸ್ ನೀಡುವಂತೆ ಪೊಲೀಸ್ ಇಲಾಖೆಗೆ ಹೇಳಿದ್ದಾರೆ.
ಬಲ್ಜಿಂದರ್ ಕೌರ್ ಹಾಗೂ ಸುಖರಾಜ್ ಸಿಂಗ್ 2019ರ ಫೆಬ್ರವರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
BREAKING NEWS: ಗುಜರಾತಿನಲ್ಲಿ ದೇವಸ್ಥಾನಕ್ಕೆ ತೆರಳುತ್ತಿದ್ದ ಭಕ್ತರ ಮೇಲೆ ಹರಿದ ಕಾರು: 6 ಮಂದಿ ಸಾವು, ಹಲವರಿಗೆ ಗಾಯ
BIGG NEWS: ಮುರಘಾಮಠದ ಶ್ರೀಗಳಿಗೆ ಮಠದಿಂದಲೇ ಉಪಹಾರ ತಂದುಕೊಟ್ಟ ಸಿಬ್ಬಂದಿ