ನವದೆಹಲಿ: ಪಂಜಾಬ್ನ ಅಡ್ವೊಕೇಟ್ ಜನರಲ್ ಡಾ.ಅನ್ಮೋಲ್ ರಟ್ಟನ್ ಸಿಧು ಅವರು ವೈಯಕ್ತಿಕ ಕಾರಣಗಳನ್ನು ನೀಡಿ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಸಿಧು ಅವರು ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಪತ್ರ ಬರೆದಿದ್ದಾರೆ.
“ವೈಯಕ್ತಿಕ ಕಾರಣಗಳಿಂದಾಗಿ, ನಾನು ಈ ಪ್ರತಿಷ್ಠಿತ ಹುದ್ದೆಯಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗುವುದಿಲ್ಲ” ಎಂದು ಅವರು ತಮ್ಮ ಸಂಕ್ಷಿಪ್ತ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ. ಸಿಧು ಅವರನ್ನು ಮಾರ್ಚ್ನಲ್ಲಿ ಅಡ್ವೊಕೇಟ್ ಜನರಲ್ ಆಗಿ ನೇಮಿಸಲಾಯಿತು.
Most humbly, submitting my resignation from the post of Advocate General of the State of Punjab.
Thankful to Hon’ble the Chief Minister @BhagwantMann ji, @ArvindKejriwal ji, @raghav_chadha ji and above all the people for this opportunity to serve the State. pic.twitter.com/gBQQrFXPcX
— Dr Anmol Rattan Sidhu (@AnmolRattanSid1) July 26, 2022
“ವೈಯಕ್ತಿಕ ಕಾರಣಗಳಿಂದಾಗಿ ನಾನು ರಾಜೀನಾಮೆ ನೀಡಿದ್ದೇನೆ ಮತ್ತು ನನ್ನ ಮೇಲೆ ಯಾವುದೇ ಒತ್ತಡವಿಲ್ಲ. ನನ್ನ ರಾಜೀನಾಮೆಯನ್ನು ಅಂಗೀಕರಿಸುವಂತೆ ನಾನು ಸಿಎಂ (ಭಗವಂತ್ ಮಾನ್) ಅವರನ್ನು ವಿನಂತಿಸಿದ್ದೇನೆ” ಎಂದು ಸಿಧು ಹೇಳಿದರು.
ಜುಲೈ ೧೯ ರಂದು ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು ಎಂದು ಸಿಧು ಹೇಳಿದರು.
ಪಂಜಾಬ್ ಮುಖ್ಯಮಂತ್ರಿಗೆ ಧನ್ಯವಾದ ಅರ್ಪಿಸಿದ ರತನ್ ಸಿಧು ತಮ್ಮ ರಾಜೀನಾಮೆ ಪತ್ರವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. “ಅತ್ಯಂತ ವಿನಮ್ರತೆಯಿಂದ, ಪಂಜಾಬ್ ರಾಜ್ಯದ ಅಡ್ವೊಕೇಟ್ ಜನರಲ್ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ” ಎಂದು ಅವರು ಬರೆದಿದ್ದಾರೆ.