ಬೆಂಗಳೂರು : ನಾನು ಹುಷಾರಾಗಿದ್ದೇನೆ, ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ‘ಅಪ್ಪು’ ಮಾಡಿದ್ದ ಹಳೆಯ ಪೋಸ್ಟ್ ವೈರಲ್ ಆಗಿದೆ.
ಅಕ್ಟೋಬರ್ 29 ಅದೊಂದು ಕರಾಳ ದಿನ, ಹೌದು ನಟ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಇಂದಿಗೆ ಒಂದು ವರ್ಷ. ನಟ ಪುನೀತ್ ಸಾವಿಗೆ ಕಂಬನಿ ಮಿಡಿಯದ ಜನರೇ ಇಲ್ಲ. ಅಕ್ಟೋಬರ್ 29 ಅಭಿಮಾನಿಗಳ ಪಾಲಿಗೆ ಕರಾಳ ದಿನ ಎಂದರೆ ತಪ್ಪಾಗಲಾರದು. ಇಂದು ಪುನೀತ್ ಅಗಲಿ ಒಂದು ವರ್ಷವಾಗಿದೆ. ಈ ಬೆನ್ನಲ್ಲೇ ಪುನೀತ್ ಪೋಸ್ಟೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಾನು ಹುಷಾರಾಗಿದ್ದೀನಿ, ಡೋಂಟ್ ವರಿ ಎಂಬ ಈ ಹಿಂದಿನ ಪೋಸ್ಟ್ ಇದೀಗ ಸಖತ್ ವೈರಲ್ ಆಗುತ್ತಿದೆ.
ನಾಲ್ಕು ವರ್ಷಗಳ ಹಿಂದೆ 2018ರಲ್ಲಿ ಪುನೀತ್ ಹುಷಾರಿಲ್ಲ ಎಂಬ ಗಾಳಿ ಸುದ್ದಿಯೊಂದು ವೈರಲ್ ಆಗಿತ್ತು. ಈ ಸಂದರ್ಭದಲ್ಲಿ ಇಡೀ ಕರುನಾಡು ಆತಂಕಕ್ಕೆ ಒಳಗಾಗಿತ್ತು, ಆದರೆ ಆ ಸುದ್ದಿ ಗಾಳಿಸುದ್ದಿಯೆಂದು ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದರು . ಈ ವೇಳೆ ನಾನು ಹುಷಾರಾಗಿದ್ದೀನಿ, ಡೋಂಟ್ ವರಿ ನಿಮ್ಮ ಕಾಳಜಿಗೆ ಧನ್ಯವಾದಗಳು ಎಂದು ಪೋಸ್ಟ್ ಮಾಡಿದ್ದರು. ಇದೀಗ ಈ ಪೋಸ್ಟ್ ವೈರಲ್ ಆಗುತ್ತಿದ್ದು, ಮತ್ತೆ ಇದೇ ಪೋಸ್ಟ್ ಹಾಕಿ ಅಪ್ಪು ಸರ್ ಎಂದು ಅಭಿಮಾನಿಗಳು ಕಣ್ಣೀರಿಡುತ್ತಿದ್ದಾರೆ.
ಅಕ್ಟೋಬರ್ 29 ರಂದು ಇಂದು ನಟ ಪುನೀತ್ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯುತ್ತಿದ್ದು, ಇಡೀ ರಾಜ್ಯದ ಮೂಲೆ ಮೂಲೆಯಲ್ಲಿ ಅಪ್ಪುವಿನ ಸ್ಮರಣೆ ನಡೆಯುತ್ತಿದೆ. ಅಪ್ಪು ಸಮಾಧಿ ಮುಂದೆ ಅಭಿಮಾನಿಗಳು, ಕುಟುಂಬದವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಪುನೀತ್ ಮತ್ತೆ ಹುಟ್ಟಿ ಬನ್ನಿ ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುತ್ತಿದ್ದಾರೆ.
ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಶೀಘ್ರವೇ ವಿದ್ಯಾರ್ಥಿ ನಿಲಯ ಕಾಮಗಾರಿ ಆರಂಭ – ಸಿಎಂ ಬೊಮ್ಮಾಯಿ
ST ಮೀಸಲಾತಿಗೆ ತಳವಾರ: ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ – ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ