ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲ ಅಗಲಿ ನಿನ್ನೆಗೆ ಒಂದು ವರ್ಷವೇ ಕಳೆದಿದೆ. ಈ ಹಿನ್ನೆಲೆ ನಿನ್ನೆ (ಅ.29) ಅಪ್ಪು ಫುಣ್ಯ ಸ್ಮರಣೆ ಹಿನ್ನೆಲೆ ರಾಜ್ಯದ ಹಲವೆಡೆ ಅನ್ನದಾನ ಸೇರಿ ಹಲವು ಮಹಾನ್ ಕಾರ್ಯಗಳು ನಡೆದಿದೆ.
ಇನ್ನೂ, ನಿನ್ನೆ ಬೆಂಗಳೂರಿನ ಕಂಠೀರವ ಸ್ಟೇಡಿಯಂಗೆ ಜನಸಾಗರವೇ ಹರಿದು ಬಂದಿತ್ತು, 1 ಲಕ್ಷದ 50 ಸಾವಿರಕ್ಕೂ ಹೆಚ್ಚು ಮಂದಿ ಅಭಿಮಾನಿಗಳು ಪುನೀತ್ ‘ಸಮಾಧಿ ದರ್ಶನ’ ಮಾಡಿದ್ದರು. ಇಂದು ಕೂಡ ಪುನೀತ್ ಸಮಾಧಿ ದರ್ಶನ ನಿಲ್ಲಲಿಲ್ಲ. ಇಂದು ಅ.30 ರಂದು ಅಪ್ಪು ಸಮಾಧಿ ವೀಕ್ಷಿಸಲು ಜನಸಾಗರವೇ ಹರಿದು ಬಂದಿತ್ತು. ಎಷ್ಟೇ ದಿನಗಳು ಉರುಳಿದರೂ ಪುನೀತ್ ಮೇಲೆ ಜನರು ಇಟ್ಟಿರುವ ಅಭಿಮಾನ ತಗ್ಗುವುದಿಲ್ಲ ಎಂಬುದಕ್ಕೆ ಇದೊಂದು ನಿದರ್ಶನ.
ರಾಜ್ಯದ ಮೂಲೆ ಮೂಲೆಯಲ್ಲಿ ನಿನ್ನೆ ‘ಅಪ್ಪು ಪುಣ್ಯಸ್ಮರಣೆ’ ನಡೆದಿದ್ದು, ಪುನೀತ್ ಹೆಸರಿನಲ್ಲಿ ಅನ್ನದಾನ ಕಾರ್ಯಕ್ರಮ ಸೇರಿ ಹಲವು ಪುಣ್ಯ ಕಾರ್ಯಗಳು ನೆರವೇರಿದೆ. ಸರತಿ ಸಾಲಿನಲ್ಲಿ ಬಂದು ಪುನೀತ್ ಸಮಾಧಿ ದರ್ಶನ ಪಡೆಯುತ್ತಿದ್ದಾರೆ.
ಪುನೀತ್ ಸಾಧನೆಯನ್ನು ಪಠ್ಯ ಪುಸ್ತಕದಲ್ಲಿ ಸೇರಿಸಲು ಮನವಿ
ಪುನೀತ್ ರಾಜ್ ಕುಮಾರ್ ಅವರ ಜೀವನ ಮತ್ತು ಸಾಧನೆಯನ್ನು ಪಠ್ಯ ಪುಸ್ತಕದಲ್ಲಿ ಸೇರಿಸುವಂತೆ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಮನವಿ ಮಾಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಅಭಿಮಾನಿಗಳು ಮನವಿ ಪತ್ರ ಸಲ್ಲಿಸಿದ್ದಾರೆ. ಕನ್ನಡ ಪಠ್ಯ ಪುಸ್ತಕದಲ್ಲಿ ಅಪ್ಪು ಜೀವನ ಮತ್ತೆ ಸಾಧನೆ ಕಥೆಯನ್ನು ಸೇರಿಸಲು ಮನವಿ ಮಾಡಿದ್ದಾರೆ. ಈಗಾಗಲೇ 6ನೇ ತರಗತಿ ಪಠ್ಯ ದಲ್ಲಿ ಡಾ. ರಾಜ್ ಕುಮಾರ್ ಜೀವನ ಸಾಧನೆ ಪಠ್ಯ ಸೇರಿಸಲಾಗಿದೆ. ಅದೆ ರೀತಿ ನಟ ಪುನೀತ್ ರಾಜ್ ಕುಮಾರ್ ಜೀವನ ಸಾಧನೆ ಕಥೆ ಸೇರಿಸಲು ಅಪ್ಪು ಅಭಿಮಾನಿಗಳು ಮನವಿ ಮಾಡಿದ್ದಾರೆ.
ಹೆಚ್ಚಿನ ಜನ ‘ಹಣ’ ಎಲ್ಲಿ ಬಚ್ಚಿಡ್ತಾರೆ ಗೊತ್ತಾ? ‘ಸಮೀಕ್ಷೆ’ಯಿಂದ ಇಂಟ್ರೆಸ್ಟಿಂಗ್ ಸಂಗತಿ ಬಹಿರಂಗ
ಬಾಗ್ದಾದ್ ಫುಟ್ಬಾಲ್ ಸ್ಟೇಡಿಯಂ ಬಳಿ ಸ್ಫೋಟ: 10 ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ