ಬೆಂಗಳೂರು : ನಗರದ ಅರಮನೆ ಮೈದಾನದಲ್ಲಿ ಇಂದು ಪುನೀತ್ ರಾಜ್ ಕುಮಾರ್ ನೆನಪಿನಲ್ಲಿ ‘ಪುನೀತ್ ಪರ್ವ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇಂದು ಸಂಜೆ 6:30 ಕ್ಕೆ ಚಾಲನೆ ಸಿಗಲಿದೆ.
ಇನ್ನೂ, ಈ ಕಾರ್ಯಕ್ರಮ ಆರಂಭಕ್ಕೂ ಮುನ್ನ ನಟ ರಾಘವೇಂದ್ರ ರಾಜ್ ಕುಮಾರ್ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ್ದು, ಅಪ್ಪು ಹಾಡಿದ ಹಾಡನ್ನು ನಾನು ಹೇಳುತ್ತೇನೆ, ಶಿವಣ್ಣ ಡ್ಯಾನ್ಸ್ ಮಾಡುತ್ತಾರೆ, ಕುನಾಲ್ ಗಾಂಜಾವಾಲ್ ಎಲ್ಲರೂ ಇರ್ತಾರೆ, ಆದರೆ ಹೃದಯ ಪೂರ್ವಕವಾಗಿ ನೀವು ಕಾರ್ಯಕ್ರಮವನ್ನು ಚೆನ್ನಾಗಿ ನಡೆಸಿಕೊಡಬೇಕು ಎಂದು ಮನವಿ ಮಾಡುತ್ತೇನೆ. ಅಪ್ಪು ನಮ್ಮನ್ನು ಬಿಟ್ಟು ಹೋದಾಗಿನಿಂದ ಏನೂ ಸಮಸ್ಯೆ ಆಗದ ಹಾಗೆ ಸಹಕಾರ ನೀಡಿದ್ದೀರಿ..ಅದೇ ರೀತಿ ಇಂದು ಕೂಡ ನೀವು ನಮಗೆ ವಿಶೇಷ ಸಹಕಾರ ನೀಡಬೇಕು. ಇದು ನಿಮ್ಮದೇ ಕಾರ್ಯಕ್ರಮ , ಎಲ್ಲರೂ ಸಹಕರಿಸಿ ಎಂದು ನಟ ರಾಘವೇಂದ್ರ ರಾಜ್ ಕುಮಾರ್ ಮನವಿ ಮಾಡಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಇಂದು ಪುನೀತ್ ರಾಜ್ ಕುಮಾರ್ ನೆನಪಿನಲ್ಲಿ ‘ಪುನೀತ್ ಪರ್ವ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಭಾರತ ಚಿತ್ರರಂಗದ ಖ್ಯಾ ತ ಗಣ್ಯರು ಕಾರ್ಯಕ್ರಮಕ್ಕೆ ಧಾವಿಸುತ್ತಿದ್ದು, ನಟರಾದ ಸೂರ್ಯ, ಪ್ರಭುದೇವ್, ಸಿದ್ದಾರ್ಥ್ ಸೇರಿದಂತೆ ಹಲವರು ಈಗಾಗಲೇ ಬೆಂಗಳೂರಿಗೆ ಆಗಮಿಸಿದ್ದಾರೆ. ಅರ್ಮಾನ್ ಮಲ್ಲಿಕ್, ಗುರುಕಿರಣ್, ಕುನಾಲ್ ಗಾಂಜಾವಾಲಾ ರವರಿಂದ ಗಾಯನ ಕಾರ್ಯಕ್ರಮ ನಡೆಯಲಿದ್ದು, ರಮ್ಯಾ, ಶಿವರಾಜ್ ಕುಮಾರ್ ಸೇರಿದಂತೆ ಹಲವು ಸ್ಯಾಂಡಲ್ ವುಡ್ ನಟ ನಟಿಯರು ಹೆಜ್ಜೆ ಹಾಕಲಿದ್ದಾರೆ.
ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಡಾಕ್ಯುಮೆಂಟರಿ ಮಾದರಿಯ ಸಿನಿಮಾ ಗಂಧದ ಗುಡಿ ಪ್ರಿ ರಿಲೀಸ್ ಇವೆಂಟ್ ಕೂಡ ಇದಾಗಿದ್ದು, ಭಾರತೀಯ ಸಿನಿಮಾ ರಂಗದ ಅನೇಕ ದಿಗ್ಗಜರು ಸಮಾರಂಭದಲ್ಲಿ ಭಾಗಿ ಆಗುತ್ತಿದ್ದಾರೆ.ಸಿನಿಮಾ ಮತ್ತು ರಾಜಕೀಯ ಕ್ಷೇತ್ರದ ಗಣ್ಯರು ಮಾತ್ರವಲ್ಲ, 40 ಸಾವಿರಕ್ಕೂ ಅಧಿಕ ಅಭಿಮಾನಿಗಳು ಕೂಡ ಈ ಕಾರ್ಯಕ್ರಮಕ್ಕೆ ಸಾಕ್ಷಿ ಆಗಿರುವುದರಿಂದ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ
ಸಮಾರಂಭವು ಸರಾಗವಾಗಿ ನಡೆಯುವಂತೆ ನೋಡಿಕೊಳ್ಳುವುದಕ್ಕಾಗಿ ಬೆಂಗಳೂರು ಪೊಲೀಸರು ಭಾರೀ ಸಿದ್ದತೆಯನ್ನೇ ಮಾಡಿಕೊಂಡಿದ್ದಾರೆ.1400 ಪೊಲೀಸರ್, 180 ಪಿಎಸ್.ಐ, 60 ಇನ್ಸೆಪೆಕ್ಟರ್, 14 ಎಸಿಪಿ ಹಾಗೂ 3 ಮಂದಿ ಡಿಸಿಪಿಗಳನ್ನು ನಿಯೋಜಿಸಲಾಗಿದೆ. ಅಷ್ಟೇ ಅಲ್ಲದೇ, 20 ಕೆ.ಎಸ್.ಆರ್ಪಿ ತುಕಡಿ ಕೂಡ ಆ ಸ್ಥಳದಲ್ಲಿ ಇರಲಿದೆ. ಕಾರ್ಯಕ್ರಮವನ್ನು ವೀಕ್ಷಿಸಲು ಬರುವ ಅಭಿಮಾನಿಗಳಿಗೆ ಪ್ರತ್ಯೇಕ ಪಾಸ್ ವ್ಯವಸ್ಥೆ ಕೂಡ ಮಾಡಲಾಗಿದ್ದು, ಪಾಸ್ ಇದ್ದವರಿಗೆ ಪ್ರವೇಶವನ್ನು ಕಲ್ಪಿಸಲಾಗಿದೆ.
BIG BREAKING NEWS: ನಟ ಚೇತನ್ ವಿರುದ್ಧ ಮತ್ತೊಂದು ದೂರು ದಾಖಲು | Actor Chetan Kumar
BIG NEWS: 10 ಲಕ್ಷ ಉದ್ಯೋಗಾರ್ಥಿಗಳಿಗೆ ಅ.22ರಂದು ಪ್ರಧಾನಿ ಮೋದಿಯಿಂದ ಉದ್ಯೋಗ ಮೇಳಕ್ಕೆ ಚಾಲನೆ