ಪುಣೆ: ಪತಿಯೊಬ್ಬ ತನ್ನ ಪೋಷಕರು ಮತ್ತು ಮಾಂತ್ರಿಕನ ಮಾತು ಕೇಳಿ ಆಕೆಗೆ ಎಲ್ಲರ ಸಮ್ಮುಖದಲ್ಲಿ ಸ್ನಾನ ಮಾಡುವಂತೆ ಒತ್ತಾಯಿಸಿರುವ ಘಟನೆ ಬೆಳಕಿಗೆ ಬಂದಿದೆ.
ದಂಪತಿಗಳಿಗೆ ಇನ್ನೂ ಮಕ್ಕಳಾಗಿರಲಿಲ್ಲ. ಈ ಕಾರಣಕ್ಕೆ ಪತಿಯ ಹಾಗೂ ಆತನ ಪೋಷಕರು ಮಾಂತ್ರಿಕನ ಬಳಿ ಹೋಗಿದ್ದರೆ. ಅಲ್ಲಿ ಮಾಂತ್ರಿಕ ʻಆಕೆ ಗರ್ಭಿಣಿಯಾಗಲು ಧಾರ್ಮಿಕ ಕ್ರಿಯೆಯ ಭಾಗವಾಗಿ ಸಾರ್ವಜನಿಕ ವೀಕ್ಷಣೆಯಲ್ಲಿ ಜಲಪಾತದ ಕೆಳಗೆ ಸ್ನಾನ ಮಾಡುವಂತೆʼ ಸಲಹೆ ಕೊಟ್ಟಿದ್ದಾನೆ. ಹೀಗಾಗಿ, ಮಾಂತ್ರಿಕನ ಸಲಹೆಯ ಮೇರೆಗೆ ಮಹಿಳೆಯನ್ನು ರಾಯಗಢ ಜಿಲ್ಲೆಯ ಜಲಪಾತಕ್ಕೆ ಕರೆದೊಯ್ದು ಎಲ್ಲರ ಸಮ್ಮುಖದಲ್ಲಿ ಸ್ನಾನ ಮಾಡುವಂತೆ ಒತ್ತಾಯಿಸಿದ್ದಾನೆ.
ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರೆಯುತ್ತಿದೆ ಎಂದು ಭಾರತಿ ವಿದ್ಯಾಪೀಠದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.