ಕೆಎನ್ಎನ್ಡಿಜಿಟಲ್ ಡೆಸ್ಕ್ : ಸಿಲಿಂಡರ್ ಬೆಲೆಯಲ್ಲಿ ನಿರಂತರ ಹೆಚ್ಚಳವಾಗ್ತಿದೆ. ಅದರ ಹೊರತಾಗಿಯೂ, ನೀವು ಕೇವಲ 750 ರೂಪಾಯಿಯಲ್ಲಿ ಎಲ್ಪಿಜಿ ಸಿಲಿಂಡರ್ ಖರೀದಿಸ್ಬೋದು. ಅದ್ಹೇಗೆ ಅಂತಾ ಯೋಚನೆ ಮಾಡ್ತಿದ್ದೀರಾ? ಮುಂದೆ ಓದಿ ಗೊತ್ತಾಗುತ್ತೆ.
ಅಸಲಿಗೆ, ಸರ್ಕಾರಿ ತೈಲ ಕಂಪನಿ ವಿಶೇಷ ಸೌಲಭ್ಯ ನೀಡ್ತಿದ್ದು, ಅದರ ಅಡಿಯಲ್ಲಿ ನೀವು ರಿಯಾಯಿತಿಯಲ್ಲಿ ಎಲ್ಪಿಜಿ ಸಿಲಿಂಡರ್ ಖರೀದಿಸಬಹುದು. ಹೌದು, ಇಂಡೇನ್ ಸೇವೆಯನ್ನ ಬಳಸಿಕೊಂಡು ನೀವು ಕೇವಲ 750 ರೂಪಾಯಿಗೆ ಗ್ಯಾಸ್ ಸಿಲಿಂಡರ್ ಖರೀದಿಸಬಹುದು.
ಪ್ರಸ್ತುತ, ಗ್ಯಾಸ್ ಸಿಲಿಂಡರ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದ್ದು, 14.2 ಕೆಜಿ ಸಿಲಿಂಡರ್ ಬೆಲೆ 1053 ರೂಪಾಯಿ ಆಗಿದೆ. ಆದ್ರೆ, ವಿಶೇಷ ಅಫರ್ನಲ್ಲಿ ನಿಮಗೆ 750ಕ್ಕೆ ಲಭ್ಯವಾಗಲಿದೆ.
ಹೌದು, ಅಸಲಿಗೆ ಇಂಡೇನ್ ತನ್ನ ಗ್ರಾಹಕರಿಗಾಗಿ ಕಾಂಪೋಸಿಟ್ ಸಿಲಿಂಡರ್ ಸೌಲಭ್ಯ ಆರಂಭಿಸಿದೆ. ಇದನ್ನ ಖರೀದಿಸಲು ನೀವು ಕೇವಲ 750 ರೂಪಾಯಿ ಖರ್ಚು ಮಾಡಿದ್ರೆ ಸಾಕು. ಆದ್ರೆ, ಈ ಸಿಲಿಂಡರ್ ತೂಕದಲ್ಲಿ ಕಡಿಮೆ ಇರುತ್ತೆ. ಅಂದ್ರೆ 10 ಕೆಜಿ ಅನಿಲವನ್ನ ಮಾತ್ರ ನೀವು ಪಡೆಯಬೋದು. ಸಧ್ಯ ಈ ಸೌಲಭ್ಯ ದೇಶದ 28ಕ್ಕೂ ಹೆಚ್ಚು ನಗರಗಳಲ್ಲಿ ಲಭ್ಯವಿದ್ದು, ಶೀಘ್ರದಲ್ಲೇ ಎಲ್ಲಾ ನಗರಗಳಲ್ಲೂ ಲಭ್ಯವಾಗಲಿದೆ ಎಂದು ಕಂಪನಿ ಹೇಳಿದೆ.