ಬೆಂಗಳೂರು : ವೈದ್ಯ ವೃತ್ತಿಯ ಗೌರವಯುತ ನಿರ್ವಹಣೆಗಾಗಿ ವೈದ್ಯರು ಮತ್ತು ವೈದ್ಯ ಸಿಬ್ಬಂದಿ ಮೇಲಾಗುವ ಹಿಂಸಾಚಾರ, ಹಲ್ಲೆ, ಅಪಮಾನ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುವ ನಿಂದನೆಯನ್ನು ನಿಯಂತ್ರಿಸಲು ಮಸೂದೆ ರೂಪಿಸಿ ಅಂಗೀಕರಿಸಲಾಗಿದೆ.
ಈ ಕುರಿತು ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ಹಂಚಿಕೊಂಡಿದ್ದು, ಈಗಿರುವ ಕಾಯ್ದೆಗೆ ತಿದ್ದುಪಡಿ ತಂದು ಈ ರೀತಿಯ ಪ್ರಕರಣಗಳ ಶಿಕ್ಷೆಯ ಪ್ರಮಾಣ ಹೆಚ್ಚಿಸಲಾಗಿದೆ. ಇದರಿಂದ ಸಮಾಜದಲ್ಲಿ ಗೌರವಯುತವಾಗಿ ವೃತ್ತಿ ನಿರತ ವೈದ್ಯರು ತಮ್ಮ ಕರ್ತವ್ಯ ನಿರ್ವಹಿಸಲು ಅನುಕೂಲವಾಗಿದೆ. ವೈದ್ಯರ, ವೈದ್ಯಕೀಯ ಸಿಬ್ಬಂದಿಗಳ ಶ್ರೇಯೋಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ವೃತ್ತಿನಿರತ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮೇಲಿನ ಹಿಂಸಾಚಾರ ತಡೆಗೆ ಮಸೂದೆ ಅಂಗೀಕಾರ
* ವೈದ್ಯರ ಮೇಲಿನ ಹಿಂಸೆ, ಅಪಮಾನ, ಆಸ್ತಿ-ಪಾಸ್ತಿ ಹಾನಿಗೆ ಶಿಕ್ಷೆಯ ಪ್ರಮಾಣ ಹೆಚ್ಚಳ
* 3 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ
* 25 ಸಾವಿರ ರೂಪಾಯಿಯಿಂದ 2 ಲಕ್ಷದವರೆಗೆ ದಂಡ
* ಸಾಮಾಜಿಕ ಜಾಲತಾಣದ ಮೂಲಕ ವೈದ್ಯರ ಅವಹೇಳನವೂ ಶಿಕ್ಷಾರ್ಹ
* ವೃತ್ತಿಪರ ವೈದ್ಯರಿಗೆ ನೋಂದಣಿ ಕಡ್ಡಾಯ. ನಕಲಿ ವೈದ್ಯ ವೃತ್ತಿಯಲ್ಲಿ ತೊಡಗಿದವರಿಗೆ 10 ಸಾವಿರದಿಂದ 1 ಲಕ್ಷದವರೆಗೆ ದಂಡ