ಬೆಂಗಳೂರು: ಪಬ್ಲಿಕ್ ರಿಲೇಶನ್ಸ್ ಕೌನ್ಸಿಲ್ ಆಫ್ ಇಂಡಿಯಾ (PRCI), ರವರು ಪ್ಯಾನ್-ಇಂಡಿಯಾ ಪ್ರೊಫೆಷನಲ್ ಅಸೋಸಿಯೇಷನ್ ವತಿಯಿಂದ ಮಂಗಳೂರಿನಲ್ಲಿ ನಡೆದ 18ನೇ ಜಾಗತಿಕ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗದವರನ್ನು, ಬೆಂಗಳೂರಿನಲ್ಲಿ ಚಾಣಕ್ಯ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿತು.
ಚಾಣಕ್ಯ ಪ್ರಶಸ್ತಿಗಳು, PRCI ನ ಪ್ರಮುಖ ಪ್ರಶಸ್ತಿಯಾಗಿದ್ದು, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಗಮನಾರ್ಹವಾಗಿ ಸಂವಹನ ಅಭ್ಯಾಸಗಳನ್ನು ಹೊಂದಿರುವ ಪ್ರಭಾವಿ ಗೌರವ ವ್ಯಕ್ತಿಗಳಿಗೆ ವಾರ್ಷಿಕವಾಗಿ ನೀಡಲಾಗುತ್ತದೆ. ಕರ್ನಾಟಕಕ್ಕೆ 2024ನೇ ಸಾಲಿನಲ್ಲಿ ಅನೇಕ ಚಾಣಕ್ಯ ಪ್ರಶಸ್ತಿಗಳು ಲಭಿಸಿರುತ್ತದೆ.
ನಾಡೋಜ ಡಾ. ಎಸ್. ಷಡಕ್ಷರಿ, ಅಧ್ಯಕ್ಷರು, ರಮಣಶ್ರೀ ಹೊಟೇಲ್ ಮತ್ತು ಸಂಸ್ಥೆಗಳು
ಕೆ.ಎನ್. ವಾಸುದೇವ ಅಡಿಗ, ಅಧ್ಯಕ್ಷರು, ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಪಾಕಶಾಲಾ
ಡಾ. ಮಮತಾ ಬಿ.ಆರ್. ಭಾಆಸೇ(ನಿವೃತ್ತ)
ಗಿರೀಶ್ ರಾವ್ ಹತ್ವಾರ್ (ಜೋಗಿ), ಪತ್ರಕರ್ತರು ಮತ್ತು ಲೇಖಕರು
ಇಂದುಧರ ಹೊನ್ನಾಪುರ, ಪತ್ರಕರ್ತರು
ಮನೋಹರ್, ಚಲನಚಿತ್ರ ನಿರ್ದೇಶಕರು
ಗುರುಕಿರಣ್, ಸಂಗೀತ ನಿರ್ದೇಶಕರು
ಈ ಸಮಾರಂಭದಲ್ಲಿ ಡಾ. ವುಡೆ ಪಿ. ಕೃಷ್ಣ, ಡಾ.ಸಿ.ಸೋಮಶೇಖರ್ ಭಾಆಸೇ., (ನಿವೃತ್ತ), ಸ್ವೀಜಲ್ ಪ್ರುಟಡೋ, ಮಿಸ್ ಗ್ಲೋಬಲ್ ಇಂಡಿಯಾ 2024, ರವಿಕಿರಣ್ ನಟ, ಎಂ.ಬಿ. ಜಯರಾಮ್, ಅಧ್ಯಕ್ಷರು PRCI, ಡಾ. ಕೆ.ಆರ್ ವೇಣುಗೋಪಾಲ್, ವಿಶ್ರಾಂತ ಕುಲಪತಿಗಳು, ಡಾ.ಬಿ.ಕೆ ರವಿ, ಕುಲಪತಿಗಳು, ಕೊಪ್ಪಳ ವಿಶ್ವವಿದ್ಯಾಲಯ, ಗೀತಾ ಶಂಕರ್, ರಾಷ್ಟ್ರೀಯ ಅಧ್ಯಕ್ಷರು PRCI ಅವರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.
BREAKING: ನವದೆಹಲಿಯ ‘ಸುಪ್ರೀಂ ಕೋರ್ಟ್’ನಲ್ಲಿ ಭೀಕರ ಅಗ್ನಿ ಅವಘಡ | Fire in Supreme Court