Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಬಲವಾದ ಆಧಾರವಿಲ್ಲದೆ ಪತ್ನಿ ನಡತೆ ಅನುಮಾನಿಸುವುದು ಮಾನಸಿಕ ಕೌರ್ಯ : ಹೈಕೋರ್ಟ್ ಮಹತ್ವದ ತೀರ್ಪು

20/02/2026 6:23 AM

ರಾಜ್ಯದ `SSLC-PUC’ ವಿದ್ಯಾರ್ಥಿಗಳೇ ಗಮನಿಸಿ : ನಿಮಗೆ `ಪರೀಕ್ಷೆ’ ಬಗ್ಗೆ ಗೊಂದಲ, ಸಮಸ್ಯೆಗಳಿದ್ದಲ್ಲಿ ಜಸ್ಟ್ ಈ ಸಂಖ್ಯೆಗೆ ಕರೆ ಮಾಡಿ !

20/02/2026 6:21 AM

‘ಕ್ರೆಡಿಟ್ ಕಾರ್ಡ್’ ಬಳಕೆದಾರರೇ ಗಮನಿಸಿ :  ಏ. 1 ರಿಂದ ಬದಲಾಗಲಿವೆ ಈ ನಿಯಮಗಳು | Credit card rules

20/02/2026 6:20 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG Alert: ಸಾರ್ವಜನಿಕರೇ ನೀವು ‘ಬಾಟಲ್ ನೀರು’ ಅಂತ ಕುಡಿಯೋ ಮುನ್ನಾ ಈ ಶಾಕಿಂಗ್ ಸುದ್ದಿ ಓದಿ!
KARNATAKA

BIG Alert: ಸಾರ್ವಜನಿಕರೇ ನೀವು ‘ಬಾಟಲ್ ನೀರು’ ಅಂತ ಕುಡಿಯೋ ಮುನ್ನಾ ಈ ಶಾಕಿಂಗ್ ಸುದ್ದಿ ಓದಿ!

By kannadanewsnow0908/04/2025 3:24 PM

ಬೆಂಗಳೂರು: ರಾಜ್ಯದಲ್ಲಿ ಮಾರಾಟವಾಗುತ್ತಿರುವಂತ ನೀರಿನ ಬಾಟಲ್ ಬಗ್ಗೆ ಶಾಕಿಂಗ್ ವರದಿಯನ್ನು ಆಹಾರ ಸುರಕ್ಷತಾ ಇಲಾಖೆ ನೀಡಿದೆ. ಕರ್ನಾಟಕದಲ್ಲಿ ಜನರು ಬಾಟಲ್ ನೀರು ಅಂತ ಕುಡಿಯೋಕೂ ಮುನ್ನಾ ಶಾಕಿಂಗ್ ರಿಪೋರ್ಟ್ ಏನಿದೆ ಅಂತ ಮುಂದೆ ಓದಿ.

ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತಾ ವಿಭಾಗದ ವತಿಯಿಂದ ಫೆಬ್ರವರಿ ಮತ್ತು ಮಾರ್ಚ್‌ 2025ರ ಮಾಹೆಗಳಲ್ಲಿ ಈ ಕೆಳಕಂಡ ಕ್ರಮಗಳನ್ನು ವಹಿಸಲಾಗಿರುತ್ತದೆ.

ಫೆಬ್ರವರಿ 2025:

ಫೆಬ್ರವರಿ 2025ರ ಮಾಹೆಯಲ್ಲಿ ಒಟ್ಟಾರೆ 3698 ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿರುತ್ತದೆ.

ವಿಶೇಷ ಅಭಿಯಾನದ ಮೂಲಕ ಕುಡಿಯುವ ನೀರಿನ ಬಾಟಲ್‌ಗಳಲ್ಲಿನ ನೀರಿನ 296 ಮಾದರಿಗಳನ್ನು ವಿಶ್ಲೇಷಣೆಗಾಗಿ ಸಂಗ್ರಹಿಸಿದ್ದು, ಅವುಗಳಲ್ಲಿ 255 ಮಾದರಿಗಳ ವಿಶ್ಲೇಷಣಾ ಕಾರ್ಯ ಪೂರ್ಣಗೊಂಡಿದ್ದು, 72 ಮಾದರಿಗಳು ಸುರಕ್ಷಿತ ಎಂದು, 95 ಮಾದರಿಗಳು ಅಸುರಕ್ಷಿತ ಎಂದು ಹಾಗೂ 88 ಮಾದರಿಗಳು ಕಳಪೆ ಗುಣಮಟ್ಟದ್ದು ಎಂದು ವರದಿಯಾಗಿರುತ್ತವೆ. ಉಳಿದ ಮಾದರಿಗಳ ವಿಶ್ಲೇಷಣಾ ಕಾರ್ಯವು ಪ್ರಗತಿಯಲ್ಲಿರುತ್ತದೆ.

ಕರಿದ ಹಸಿರು ಬಟಾಣಿಗಳಲ್ಲಿ ಕೃತಕ ಬಣ್ಣಗಳ ಬಳಕೆಯ ಬಗ್ಗೆ ಖಚಿತಪಡಿಸಿಕೊಳ್ಳಲು 115 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಸಲ್ಲಿಸಿದ್ದು, 46 ಮಾದರಿಗಳು ಸುರಕ್ಷಿತ ಎಂದು, 69 ಮಾದರಿಗಳು ಅಸುರಕ್ಷಿತ ಎಂದು ವರದಿಯಾಗಿರುತ್ತವೆ. ಉಳಿದ ಮಾದರಿಗಳ ವಿಶ್ಲೇಷಣಾ ಕಾರ್ಯವು ಪ್ರಗತಿಯಲ್ಲಿರುತ್ತದೆ.

ಮಾರ್ಚ್‌ 2025:

ಮಾರ್ಚ್‌ 2025ರ ಮಾಹೆಯಲ್ಲಿ ಒಟ್ಟಾರೆ 3204 ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿರುತ್ತದೆ.

ತುಪ್ಪಗಳ 49 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಸಲ್ಲಿಸಿದ್ದು, ಅವುಗಳಲ್ಲಿ 6 ಮಾದರಿಗಳ ವಿಶ್ಲೇಷಣಾ ಕಾರ್ಯ ಪೂರ್ಣಗೊಂಡಿದ್ದು, ಎಲ್ಲಾ ಮಾದರಿಗಳು ಸುರಕ್ಷಿತ ಎಂದು ವರದಿಯಾಗಿರುತ್ತವೆ. ಉಳಿದ ಮಾದರಿಗಳ ವಿಶ್ಲೇಷಣಾ ಕಾರ್ಯವು ಪ್ರಗತಿಯಲ್ಲಿರುತ್ತದೆ.

ಖೋವಾಗಳ 43 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಸಲ್ಲಿಸಿದ್ದು, ಅವುಗಳಲ್ಲಿ 09 ಮಾದರಿಗಳ ವಿಶ್ಲೇಷಣಾ ಕಾರ್ಯ ಪೂರ್ಣಗೊಂಡಿದ್ದು, 03 ಮಾದರಿಗಳು ಕಳಪೆ ಗುಣಮಟ್ಟದ್ದು ಎಂದು, 06 ಮಾದರಿಗಳು ಸುರಕ್ಷಿತ ಎಂದು ವರದಿಯಾಗಿರುತ್ತವೆ. ಉಳಿದ ಮಾದರಿಗಳ ವಿಶ್ಲೇಷಣಾ ಕಾರ್ಯವು ಪ್ರಗತಿಯಲ್ಲಿರುತ್ತದೆ.

ಪನ್ನೀರ್‌ಗಳ 231 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಸಲ್ಲಿಸಿದ್ದು, ಅವುಗಳಲ್ಲಿ 32 ಮಾದರಿಗಳ ವಿಶ್ಲೇಷಣಾ ಕಾರ್ಯ ಪೂರ್ಣಗೊಂಡಿದ್ದು, 02 ಮಾದರಿಗಳು ಅಸುರಕ್ಷಿತ ಎಂದು, 30 ಮಾದರಿಗಳು ಸುರಕ್ಷಿತ ಎಂದು ವರದಿಯಾಗಿರುತ್ತವೆ. ಉಳಿದ ಮಾದರಿಗಳ ವಿಶ್ಲೇಷಣಾ ಕಾರ್ಯವು ಪ್ರಗತಿಯಲ್ಲಿರುತ್ತದೆ.

ಸಿಹಿತಿಂಡಿಗಳ 198 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಸಲ್ಲಿಸಿದ್ದು, ಅವುಗಳಲ್ಲಿ 83 ಮಾದರಿಗಳ ವಿಶ್ಲೇಷಣಾ ಕಾರ್ಯ ಪೂರ್ಣಗೊಂಡಿದ್ದು, 02 ಮಾದರಿಗಳು ಅಸುರಕ್ಷಿತ ಎಂದು, 81 ಮಾದರಿಗಳು ಸುರಕ್ಷಿತ ಎಂದು ವರದಿಯಾಗಿರುತ್ತವೆ. ಉಳಿದ ಮಾದರಿಗಳ ವಿಶ್ಲೇಷಣಾ ಕಾರ್ಯವು ಪ್ರಗತಿಯಲ್ಲಿರುತ್ತದೆ.

ಖಾರ ಮಿಕ್ಚರ್‌ ಗಳ 119 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಸಲ್ಲಿಸಿದ್ದು, ಅವುಗಳಲ್ಲಿ 27 ಮಾದರಿಗಳ ವಿಶ್ಲೇಷಣಾ ಕಾರ್ಯ ಪೂರ್ಣಗೊಂಡಿದ್ದು, 04 ಮಾದರಿಗಳು ಅಸುರಕ್ಷಿತ ಎಂದು, 23 ಮಾದರಿಗಳು ಸುರಕ್ಷಿತ ಎಂದು ವರದಿಯಾಗಿರುತ್ತವೆ. ಉಳಿದ ಮಾದರಿಗಳ ವಿಶ್ಲೇಷಣಾ ಕಾರ್ಯವು ಪ್ರಗತಿಯಲ್ಲಿರುತ್ತದೆ.

ಸ್ಥಳೀಯವಾಗಿ ತಯಾರಿಸಲ್ಪಡುವ ಜ್ಯೂಸ್/ಪಾನೀಯಗಳ 46 ಮಾದರಿಗಳನ್ನು, ಐಸ್‌ ಕ್ಯಾಂಡಿಗಳ 39 ಮಾದರಿಗಳನ್ನು ಮತ್ತು ಐಸ್‌ ಕ್ರೀಂಗಳ 107 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಸಲ್ಲಿಸಲಾಗಿದ್ದು, ಇನ್ನೂ ಹೆಚ್ಚಿನ ಮಾದರಿಗಳ ಸಂಗ್ರಹಣಾ ಮತ್ತು ವಿಶ್ಲೇಷಣಾ ಕಾರ್ಯವು ಪ್ರಗತಿಯಲ್ಲಿರುತ್ತದೆ. ಅಲ್ಲದೆ ಸದರಿ ಆಹಾರ ಪದಾರ್ಥಗಳ ತಯಾರಿಕಾ/ಮಾರಾಟ ಘಟಕಗಳಿಗೆ ಪರಿಶೀಲನಾ ಭೇಟಿ ನೀಡಿ ಲೋಪಗಳು ಕಂಡುಬಂದ 92 ಘಟಕಗಳಿಗೆ ನೋಟಿಸ್‌ ಅನ್ನು ಜಾರಿಗೊಳಿಸಲಾಗಿದ್ದು, 06 ಘಟಕಗಳಿಗೆ ರೂ.38,000/-ಗಳ ದಂಡ ವಿಧಿಸಲಾಗಿರುತ್ತದೆ.

ಇದಲ್ಲದೆ ಹೋಟೆಲ್‌ಗಳು/ರೆಸ್ಟೋರೆಂಟ್‌ಗಳಲ್ಲಿ ಜಿರಲೆ/ಇಲಿಗಳು ಸೇರಿದಂತೆ ಕ್ರಿಮಿ ಕೀಟಗಳ ನಿಯಂತ್ರಣಕ್ಕೆ ವಹಿಸಲಾಗಿರುವ ಕ್ರಮಗಳ ಕುರಿತಂತೆ 590 ಹೋಟೆಲ್‌ಗಳು/ ರೆಸ್ಟೋರೆಂಟ್‌ಗಳಿಗೆ ಪರಿಶೀಲನಾ ಭೇಟಿ ನೀಡಿದ್ದು, ನಿಯಂತ್ರಣಾ ಕ್ರಮಗಳನ್ನು ವಹಿಸದ 214 ಹೋಟೆಲ್‌ಗಳು/ ರೆಸ್ಟೋರೆಂಟ್‌ಗಳಿಗೆ ನೋಟಿಸ್‌ ಅನ್ನು ಜಾರಿಗೊಳಿಸಲಾಗಿದ್ದು, 11 ಹೋಟೆಲ್‌ಗಳು/ ರೆಸ್ಟೋರೆಂಟ್‌ಗಳಿಗೆ ರೂ.1,15,000/-ಗಳ ದಂಡ ವಿಧಿಸಲಾಗಿರುತ್ತದೆ.

ಆಹಾರ ಮಾದರಿಗಳ ವಿಶ್ಲೇಷಣಾ ಫಲಿತಾಂಶಗಳನ್ವಯ ಮುಂದಿನ ಕಾನೂನಾತ್ಮಕ ಕ್ರಮಗಳನ್ನು ಜರುಗಿಸಲಾಗುವುದು ಅಂತ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಎಚ್ಚರಿಕೆ ನೀಡಿದೆ.

BIG NEWS: ‘ಸರ್ಕಾರಿ ನೌಕರ’ 48 ಗಂಟೆಗೂ ಹೆಚ್ಚು ಕಾಲ ‘ಬಂಧನ’ದಲ್ಲಿದ್ದರೇ ಸೇವೆಯಿಂದ ತಂತಾನೇ ಅಮಾನತು: ಹೈಕೋರ್ಟ್

BIG NEWS: ರಾಜ್ಯದಲ್ಲಿ ಮಾರಾಟವಾಗುತ್ತಿರುವ ‘ಔಷಧಿಗಳ ಗುಣಮಟ್ಟ’ದ ಬಗ್ಗೆ ‘ಆರೋಗ್ಯ ಇಲಾಖೆ’ ಶಾಕಿಂಗ್ ಮಾಹಿತಿ ಬಿಡುಗಡೆ

Share. Facebook Twitter LinkedIn WhatsApp Email

Related Posts

BIG NEWS : ಬಲವಾದ ಆಧಾರವಿಲ್ಲದೆ ಪತ್ನಿ ನಡತೆ ಅನುಮಾನಿಸುವುದು ಮಾನಸಿಕ ಕೌರ್ಯ : ಹೈಕೋರ್ಟ್ ಮಹತ್ವದ ತೀರ್ಪು

20/02/2026 6:23 AM1 Min Read

ರಾಜ್ಯದ `SSLC-PUC’ ವಿದ್ಯಾರ್ಥಿಗಳೇ ಗಮನಿಸಿ : ನಿಮಗೆ `ಪರೀಕ್ಷೆ’ ಬಗ್ಗೆ ಗೊಂದಲ, ಸಮಸ್ಯೆಗಳಿದ್ದಲ್ಲಿ ಜಸ್ಟ್ ಈ ಸಂಖ್ಯೆಗೆ ಕರೆ ಮಾಡಿ !

20/02/2026 6:21 AM1 Min Read

‘ಕ್ರೆಡಿಟ್ ಕಾರ್ಡ್’ ಬಳಕೆದಾರರೇ ಗಮನಿಸಿ :  ಏ. 1 ರಿಂದ ಬದಲಾಗಲಿವೆ ಈ ನಿಯಮಗಳು | Credit card rules

20/02/2026 6:20 AM1 Min Read
Recent News

BIG NEWS : ಬಲವಾದ ಆಧಾರವಿಲ್ಲದೆ ಪತ್ನಿ ನಡತೆ ಅನುಮಾನಿಸುವುದು ಮಾನಸಿಕ ಕೌರ್ಯ : ಹೈಕೋರ್ಟ್ ಮಹತ್ವದ ತೀರ್ಪು

20/02/2026 6:23 AM

ರಾಜ್ಯದ `SSLC-PUC’ ವಿದ್ಯಾರ್ಥಿಗಳೇ ಗಮನಿಸಿ : ನಿಮಗೆ `ಪರೀಕ್ಷೆ’ ಬಗ್ಗೆ ಗೊಂದಲ, ಸಮಸ್ಯೆಗಳಿದ್ದಲ್ಲಿ ಜಸ್ಟ್ ಈ ಸಂಖ್ಯೆಗೆ ಕರೆ ಮಾಡಿ !

20/02/2026 6:21 AM

‘ಕ್ರೆಡಿಟ್ ಕಾರ್ಡ್’ ಬಳಕೆದಾರರೇ ಗಮನಿಸಿ :  ಏ. 1 ರಿಂದ ಬದಲಾಗಲಿವೆ ಈ ನಿಯಮಗಳು | Credit card rules

20/02/2026 6:20 AM

BREAKING: ‘ನಂದಿನಿ ಉತ್ಪನ್ನ’ಗಳ ಬಗ್ಗೆ ಅಪಪ್ರಚಾರ: ‘FIR’ ದಾಖಲು

20/02/2026 6:19 AM
State News
KARNATAKA

BIG NEWS : ಬಲವಾದ ಆಧಾರವಿಲ್ಲದೆ ಪತ್ನಿ ನಡತೆ ಅನುಮಾನಿಸುವುದು ಮಾನಸಿಕ ಕೌರ್ಯ : ಹೈಕೋರ್ಟ್ ಮಹತ್ವದ ತೀರ್ಪು

By kannadanewsnow5720/02/2026 6:23 AM KARNATAKA 1 Min Read

ಬೆಂಗಳೂರು: ಬಲವಾದ ಸಾಕ್ಷ್ಯಾಧಾರಗಳಿಲ್ಲದೆ ಪರಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಪತ್ನಿಯ ನಡತೆಯ ಬಗ್ಗೆ ಆರೋಪಿಸುವುದು ಮಾನಸಿಕ ಕ್ರೌರ್ಯ ಎಂದು…

ರಾಜ್ಯದ `SSLC-PUC’ ವಿದ್ಯಾರ್ಥಿಗಳೇ ಗಮನಿಸಿ : ನಿಮಗೆ `ಪರೀಕ್ಷೆ’ ಬಗ್ಗೆ ಗೊಂದಲ, ಸಮಸ್ಯೆಗಳಿದ್ದಲ್ಲಿ ಜಸ್ಟ್ ಈ ಸಂಖ್ಯೆಗೆ ಕರೆ ಮಾಡಿ !

20/02/2026 6:21 AM

‘ಕ್ರೆಡಿಟ್ ಕಾರ್ಡ್’ ಬಳಕೆದಾರರೇ ಗಮನಿಸಿ :  ಏ. 1 ರಿಂದ ಬದಲಾಗಲಿವೆ ಈ ನಿಯಮಗಳು | Credit card rules

20/02/2026 6:20 AM

BREAKING: ‘ನಂದಿನಿ ಉತ್ಪನ್ನ’ಗಳ ಬಗ್ಗೆ ಅಪಪ್ರಚಾರ: ‘FIR’ ದಾಖಲು

20/02/2026 6:19 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.