ಬೆಂಗಳೂರು : ಸಾರ್ವಜನಿಕರೇ ನೀವು ಕುಡಿಯುವ ನೀರು ಶುದ್ಧವಾಗಿಲ್ಲ ಎನಿಸಿದರೆ ಗ್ರಾಮ ಪಂಚಾಯಿತಿಗೆ ದೂರು ನೀಡಬಹುದು.
ಹೌದು, ಶುದ್ಧ ಕುಡಿಯುವ ನೀರು ಬಾರದಿದ್ದರೆ ಇಲಾಖೆಯ ಏಕೀಕೃತ ಸಹಾಯವಾಣಿ ಸಂಖ್ಯೆ 9480985555, 8277506000 ಕರೆ ಮಾಡಿ ದೂರು ಸಲ್ಲಿಸಿ. ನೀರಿನ ಮಾದರಿಯನ್ನು ಗ್ರಾಮ ಪಂಚಾಯಿತಿಯವರಿಗೆ ನೀಡಿ ನೀರನ್ನು ಪರೀಕ್ಷಿಸುವಂತೆ ಕೇಳಬಹುದು.
ನೀರು ಸರಬರಾಜಿಗೂ ಮುನ್ನ ನೀರಿನ ಶುದ್ಧತೆಯನ್ನು ಖಾತ್ರಿಪಡಿಸಿಕೊಂಡು ಜನರ ಕಾಳಜಿ ವಹಿಸುವುದು ಗ್ರಾಮ ಪಂಚಾಯಿತಿಯ ಕರ್ತವ್ಯ. ಪೈಪ್ ಒಡೆದು ಹೋಗಿ ನೀರು ಕಲುಷಿತವಾಗುತ್ತಿರುವುದು ಗ್ರಾಮ ಪಂಚಾಯಿತಿಯ ಅರಿವಿಗೆ ಬರದೆ ಹೋಗಿದ್ದರೆ, ನೀವು ಗ್ರಾಮ ಪಂಚಾಯಿತಿಗೆ ತಕ್ಷಣವೆ ತಿಳಿಸಿ. ಮಳೆಗಾಲದ ಮುನ್ನೆಚ್ಚರಿಕೆಯಾಗಿ ನೀರನ್ನು ಕಾಯಿಸಿ ಕುಡಿಯಿರಿ.