ಕೆಎನ್ಎನ್ಡಿಜಿಟಲ್ ಡೆಸ್ಕ್ : ಪ್ಯಾನ್ ಕಾರ್ಡ್ ಪ್ರಮುಖ ದಾಖಲೆಯಾಗಿದ್ದು, ದೇಶದಲ್ಲಿ ಯಾವುದೇ ರೀತಿಯ ಹಣಕಾಸು ವಹಿವಾಟಿಗೆ ಪ್ಯಾನ್ ಕಾರ್ಡ್ ಕಡ್ಡಾಯ ದಾಖಲೆಯಾಗಿದೆ. ಪಾನ್ಕಾರ್ಡ್ 10-ಅಂಕಿಯ ಶಾಶ್ವತ ಸಂಖ್ಯೆಯಾಗಿದ್ದು, ಇದನ್ನ ಆದಾಯ ತೆರಿಗೆ ಇಲಾಖೆಯಿಂದ ನೀಡಲಾಗುತ್ತದೆ. ಆದ್ರೆ, ಪ್ಯಾನ್ ಕಾರ್ಡ್ ಸಹಾಯದಿಂದ ನೀವು ಬ್ಯಾಂಕಿನಿಂದ ವೈಯಕ್ತಿಕ ಸಾಲವನ್ನ ಸಹ ಪಡೆಯಬಹುದು. ಹಾಗಾದ್ರೆ, ಅದರ ಪ್ರಕ್ರಿಯೆ ಏನು.?
ಇದರ ಲಾಭವನ್ನ ಪಡೆದುಕೊಳ್ಳಿ..!
ಬ್ಯಾಂಕ್ಗಳು ಪ್ಯಾನ್ ಕಾರ್ಡ್ನಲ್ಲಿ ಗರಿಷ್ಠ 50 ಸಾವಿರ ರೂಪಾಯಿಗಳ ವೈಯಕ್ತಿಕ ಸಾಲವನ್ನ ನೀಡುತ್ವೆ. ವಿಶೇಷವೆಂದ್ರೆ, ಬ್ಯಾಂಕ್ಗಳು ಏನನ್ನೂ ಒತ್ತೆ ಇಡದೆಯೇ ಈ ಸಾಲಗಳನ್ನ ನೀಡುತ್ತವೆ. ಸಾಲ ನೀಡುವ ಮೊದಲು, ಬ್ಯಾಂಕ್ ಗ್ರಾಹಕರ CIBIL ಸ್ಕೋರ್ ಪರಿಶೀಲಿಸುತ್ತದೆ. ಗ್ರಾಹಕರು ಹೇಗೆ ಲೋನ್ ರಿಟರ್ನ್ ದಾಖಲೆ ಹೊಂದಿದ್ದಾರೆ ಅನ್ನೋದನ್ನ CIBIL ಸ್ಕೋರ್ ತೋರಿಸುತ್ತದೆ. ಉತ್ತಮ CIBIL ಸ್ಕೋರ್ ಹೊಂದಿರುವ ಗ್ರಾಹಕರಿಗೆ ಬ್ಯಾಂಕ್ಗಳು ಪಾನ್ ಕಾರ್ಡ್ನಲ್ಲಿ ವೈಯಕ್ತಿಕ ಸಾಲ ಸೌಲಭ್ಯವನ್ನ ಒದಗಿಸುತ್ತವೆ. CIBIL ಸ್ಕೋರ್ ಕನಿಷ್ಠ 700 ಆಗಿರಬೇಕು. ಇಲ್ಲಿ ಗಮನಿಸಬೇಕಾದ ಅಂಶವೆಂದ್ರೆ ಗೃಹ ಸಾಲ, ಕಾರು ಸಾಲಕ್ಕೆ ಹೋಲಿಸಿದ್ರೆ ವೈಯಕ್ತಿಕ ಸಾಲದ ಮೇಲಿನ ಬಡ್ಡಿ ಹೆಚ್ಚು.
ನೀವು ಪಾನ್ ಕಾರ್ಡ್ನಲ್ಲಿ ವೈಯಕ್ತಿಕ ಸಾಲ ತೆಗೆದುಕೊಳ್ಳಲು ಬಯಸಿದ್ರೆ, ಈ ದಾಖಲೆಗಳು ಬೇಕಾಗುತ್ತವೆ. ಆಗ ಬ್ಯಾಂಕ್ ಅದಕ್ಕಾಗಿ ಕೆಲವು ದಾಖಲೆಗಳನ್ನ ಕೇಳುತ್ತದೆ. ಈ ದಾಖಲೆಗಳನ್ನ ಸಲ್ಲಿಸಿದ ನಂತರವೇ ಸಾಲವನ್ನು ಅನುಮೋದಿಸಲಾಗುತ್ತದೆ. ಇವುಗಳಲ್ಲಿ ಪ್ರಮುಖವಾದದ್ದು ಕೆಲಸದ ಅನುಭವ. ಗ್ರಾಹಕರು ಕನಿಷ್ಠ ಎರಡು ವರ್ಷಗಳ ಕೆಲಸದ ಅನುಭವವನ್ನ ಹೊಂದಿರಬೇಕು. ಇದಲ್ಲದೆ, ಆದಾಯದ ಪುರಾವೆ ಮತ್ತು ಬ್ಯಾಂಕ್ ಸ್ಟೇಟ್ಮೆಂಟ್ ಸಹ ಬ್ಯಾಂಕ್ ಕೇಳುತ್ತದೆ.
ಒಮ್ಮೆ ಬ್ಯಾಂಕ್ ಅನುಮೋದಿಸಿದ ನಂತ್ರ ಮೊತ್ತವನ್ನ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಪ್ಯಾನ್ ಕಾರ್ಡ್ನಿಂದ ಪಡೆದ ಬ್ಯಾಂಕ್ ಸಾಲವನ್ನು ಗರಿಷ್ಠ 5 ವರ್ಷಗಳವರೆಗೆ ಠೇವಣಿ ಮಾಡಬಹುದು. ಅಲ್ಲದೇ, ಗ್ರಾಹಕರ ವಯಸ್ಸು 21 ವರ್ಷದಿಂದ 60 ವರ್ಷಗಳ ನಡುವೆ ಇರಬೇಕು. ಅರ್ಜಿದಾರರ ಮಾಸಿಕ ಆದಾಯ ಕನಿಷ್ಠ 15 ಸಾವಿರ ರೂಪಾಯಿಗಳಾಗಿರಬೇಕು.