ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ಹುಟ್ಟು ಹಬ್ಬದ ದಿನವೇ ಭೀಕರ ಅಪಘಾತದಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವಂತ ಘಟನೆ ನಡೆದಿದೆ. ವಿದ್ಯಾರ್ಥಿಯ ಸಾವಿನಿಂದಾಗಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹರಿಯಬ್ಬೆ ಬಳಿಯಲ್ಲಿ ಈ ದುರಂತ ಸಂಭವಿಸಿದೆ. ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಂತ ಚಿದಾನಂದ(23) ಎಂಬ ವಿದ್ಯಾರ್ಥಿಗೆ ಇಂದು ಹುಟ್ಟಹಬ್ಬ. ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಂಡು, ಮನೆಗೆ ಮರಳುತ್ತಿದ್ದನು.
ವಿದ್ಯಾರ್ಥಿ ಚಿದಾನಂದ್ ತನ್ನ ಮಂಗುಸವಳ್ಳಿ ಊರಿಗೆ ತೆರಳುತ್ತಿದ್ದಂತ ವೇಳೆಯಲ್ಲಿ ಮಾರ್ಗಮಧ್ಯೆ ಪಲ್ಸರ್ ಬೈಕಿಗೆ ಹರಿಯಬ್ಬೆ ಗ್ರಾಮ ಪಂಚಾಯ್ತಿಗೆ ಸೇರಿದಂತ ಕಸದ ವಾಹನ ಡಿಕ್ಕಿಯಾಗಿದೆ. ತೀವ್ರವಾಗಿ ಗಾಯಗೊಂಡಂತ ಚಿದಾನಂದ್ ಗೆ ಧರ್ಮಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ಕೊಂಡೊಯ್ಯುವಂತೆ ವೈದ್ಯರು ಸೂಚಿಸಿದ ಕಾರಣ, ಆಂಬುಲೆನ್ಸ್ ಮೂಲಕ ಕರೆದೊಯ್ಯುತ್ತಿದ್ದಂತ ಸಂದರ್ಭದಲ್ಲಿ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಇದೀಗ ಮಂಗುಸವಳ್ಳಿಯಲ್ಲಿಯ ಚಿದಾನಂದ್ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ವರದಿ: ವಸಂತ ಬಿ ಈಶ್ವರಗೆರೆ
ಬಾಂಗ್ಲಾದೇಶದ ಪ್ರಧಾನಿಯಾಗಿ ಶೇಖ್ ಹಸೀನಾ ವಾಪಸ್: ಭಾರತಕ್ಕೆ ಧನ್ಯವಾದ ಅರ್ಪಿಸಿದ ಅವಾಮಿ ಲೀಗ್ ನಾಯಕ
‘ಪುನೀರ್ ರಾಜ್ ಕುಮಾರ್’ ಅಭಿಮಾನಿಗಳಿಗೆ ಗಮನಕ್ಕೆ: ನಾಳೆ ‘ಅಪ್ಪು ಸಿನಿಮಾ’ ರೀ ರಿಲೀಸ್ | Puneet Appu Movie