ಬೆಂಗಳೂರು : ರಾಜ್ಯ ಅಷ್ಟೇ ಅಲ್ಲದೆ ಇಡೀ ದೇಶದಲ್ಲೇ ಭಾರಿ ಸದ್ದು ಮಾಡಿದ್ದ ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆಸಿದ ಆರೋಪ ಪಟ್ಟಣಕ್ಕೆ ಸಂಬಂಧಪಟ್ಟಂತೆ ಇದೀಗ ಪ್ರಕರಣ ರದ್ದು ಕೋರಿ ಅರ್ಜಿ ಸಲ್ಲಿಸಿದ್ದ ಎಡಿಜಿಪಿ ಅಮೃತ್ ಪಾಲ್ ಅರ್ಜಿ ವಜಾಗೊಂಡಿದೆ. ನ್ಯಾ. ಜೆ.ಎಂ ಖಾಜಿ ಅವರಿದ್ದ ಹೈಕೋರ್ಟ್ ಪೀಠ ಈ ಒಂದು ಆದೇಶ ಹೊರಡಿಸಿದೆ.
ಅಮೃತ್ ಪಾಲ್ ಪಿಎಸ್ಐ ನೇಮಕಾತಿಯ ಉಸ್ತುವಾರಿ ವಹಿಸಿದ್ದರು. ಸೇಫ್ ಲಾಕ್ ಕಿ ಅಮೃತ್ ಪಾಲ್ ಬಳಿಯೇ ಇತ್ತು. ಈ ಒಂದು ಕಿ ಯನ್ನು ಕಿರಿಯಾಧಿಕಾರಿಗಳಿಗೆ ಕೊಟ್ಟು ದುರುಪಯೋಗ ಮಾಡಲಾಗಿದೆ. ಕೃತ್ಯದ ಸಂಬಂಧ ಲಂಚದ ಹಣದ ಭಾಗವು ರಿಕವರಿಯಾಗಿದೆ. ಹಾಗಾಗಿ ಪ್ರಕರಣ ರದ್ದುಪಡಿಸಿಸದಂತೆ ಎಸ್ ಪಿ ಪಿ ಪ್ರಸನ್ನ ಕುಮಾರ್ ಅವರು ವಾದ ಮಂಡಿಸಿದರು. ವಾದ ಪರಿಗಣಿಸಿ ಎಡಿಜಿಪಿ ಅಮೃತ್ ಪಾಲ್ ಅರ್ಜಿ ವಜಾಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿತು.