ಬೆಂಗಳೂರು : PSI ಹಾಗೂ CTI ಪ್ರಶ್ನೆ ಪತ್ರಿಕೆ ಸೋರಿಕೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಬ್ ಇನ್ಸ್ಪೆಕ್ಟರ್ ಬಾಲೆಯ್ಯ ಅವರನ್ನು ಸಿಸಿಬಿ ವಿಚಾರಣೆ ಒಳಪಡಿಸಿದಾಗ ಸ್ಪೋಟಕ ಹೇಳಿಕೆ ನೀಡಿದ್ದು ನಾನು ನಡೆಸಿದ್ದು ಸ್ಟಿಂಗ್ ಆಪರೇಷನ್ ಇದು ಒಂದು ಟಾಸ್ಕ್ ಆಗಿತ್ತು, ಆದರೆ ಈ ಒಂದು ಪ್ರಕರಣದಲ್ಲಿ ಯಾವುದೇ ಅಕ್ರಮ ಎಸೆದಿಲ್ಲ ಎಂದು ತಿಳಿಸಿದ್ದಾರೆ.
ಶುಕ್ರವಾರ ಸಬ್ ಇನ್ಸ್ಪೆಕ್ಟರ್ ಲಿಂಗಯ್ಯನನ್ನು ವಶಕ್ಕೆ ಪಡೆದಿದ್ದ ಚಂದ್ರಾಲೇಔಟ್ ಪೊಲೀಸರು ಪ್ರಕರಣದ ತನಿಖೆಗೆ ಸಿಸಿಬಿಗೆ ಒಪ್ಪಿಸಿದ್ದರು. ಸಿಸಿಬಿ ಪೆÇಲೀಸರಿಂದ ಲಿಂಗಯ್ಯ ಮಾಡಿರುವ ಚಾಟಿಂಗ್ ಕುರಿತಾಗಿ ತೀವ್ರ ವಿಚಾರಣೆ ನಡೆಸಿದ್ದಾರೆ. ಯಾರಿಗೆಲ್ಲ ಚಾಟಿಂಗ್ ಮಾಡಿದ್ದೀರಾ? ಚಾಟಿಂಗ್ ನಿಮ್ಮದೇನಾ? ಹಣದ ಬಗ್ಗೆಯೂ ಚರ್ಚೆ ಮಾಡಿದ್ದು, ಯಾರಿಂದಲಾದರೂ ಹಣ ಪಡೆದಿದ್ದೀರಾ ಎಂದು ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ವೇಳೆ ಸಿಸಿಬಿ (CCB) ಅಧಿಕಾರಿಗಳ ಬಳಿ ಸ್ಫೋಟಕ ವಿಚಾರ ಬಾಯ್ಬಿಟ್ಟಿದ್ದಾರೆ. ಇದು ಪ್ರಕರಣದಲ್ಲಿ ಹಲವಾರು ಅನುಮಾನಕ್ಕೆ ಕಾರಣವಾಗಿದೆ. ನಾನು ಮಾಡಿದ್ದು ಸ್ಟಿಂಗ್ ಆಪರೇಷನ್, ಇದೊಂದು ಟಾಸ್ಕ್ ಆಗಿತ್ತು. ನಾನು ನನ್ನ ಕೆಲಸ ಮಾಡಿದ್ದೇನೆ ಅಷ್ಟೇ, ಅಕ್ರಮ ಎಸಗಿಲ್ಲ. ನಾನು ಯಾರ ಬಳಿಯೂ ಹಣ ಪಡೆದಿಲ್ಲ. ರಹಸ್ಯ ಕಾರ್ಯಾಚರಣೆ ಮಾಡುವ ಸಲುವಾಗಿ ಅಭ್ಯರ್ಥಿಗಳ ಜೊತೆ ಮಾತನಾಡಿದ್ದೆ ಎಂದು ಹೇಳಿದ್ದಾನೆ.
ಇಬ್ಬರು ಅಭ್ಯರ್ಥಿಗಳ ಬಳಿ ಅಡ್ವಾನ್ಸ್ ಆಗಿ 10 ಲಕ್ಷ ರೂ. ಪಡೆದಿರೋ ಮಾಹಿತಿ ಇದ್ದು, ಹೀಗಾಗಿ ಹಣ ಪಡೆದು ಏನು ಮಾಡಿದ್ದೀರಿ? ಯಾರಿಗೆ ಕೊಟ್ಟಿದ್ದೀರಿ ಎಂದು ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ಆಗಿದೆಯಾ ಎಂಬ ಬಗ್ಗೆಯೂ ವಿಚಾರಣೆ ನಡೆಸಲಾಗಿದೆ. ಅಲ್ಲದೇ ಚಾಟಿಂಗ್ ನಡೆಸಿದ ವ್ಯಕ್ತಿಗಳಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.